ಸಂಪಾದಕರ ಸಂಘಕ್ಕೆ ವಣಗೇರಿ ಅಧ್ಯಕ್ಷ

Kamat Hotel Photo - 0
Published on

ಬೀದರ್: ಸ್ಥಳೀಯ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾಗಿ ಪತ್ರಕರ್ತ ಶಿವಕುಮಾರ ವಣಗೇರಿ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದಲ್ಲಿ ನಡೆದ ಸಭೆಯಲ್ಲಿ ಸಂಘ ರಚಿಸಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಫರ್ನಾಂಡಿಸ್ ಹಿಪ್ಪಳಗಾಂವ್, ಅನೀಲಕುಮಾರ ಕಮಠಾಣೆ, ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ಭಾವಿಕಟ್ಟಿ, ಕಾರ್ಯದರ್ಶಿಯಾಗಿ ಎಂ.ಪಿ. ಮುದಾಳೆ, ಸಹ ಕಾರ್ಯದರ್ಶಿಯಾಗಿ ಸ್ವಾಮಿದಾಸ ನಾಗೂರೆ, ಕೋಶಾಧ್ಯಕ್ಷರಾಗಿ ವಿಜಯಕುಮಾರ ಅಷ್ಟೂರೆ ಆಯ್ಕೆಯಾಗಿದ್ದಾರೆ. ನಾಗಶೆಟ್ಟಿ ಧರಂಪುರ, ಪ್ರದೀಪ ಬಿರಾದಾರ, ಸುನೀಲಕುಮಾರ ಕುಲಕರ್ಣಿ, ಸುಧಾರಾಣಿ ಜೈಕುಮಾರ, ಸೋಮನಾಥ ಬಿರಾದಾರ, ವಿಜಯಕುಮಾರ ಸೋನಾರೆ, ಶರದ್ ಘಂಟೆ, ರವಿಂದ್ರ ಕಾಂಬ್ಳೆ, ಜೈಕುಮಾರ, ಯಾದವರಾವ ಘೋಡ್ಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net