ಜಾಗೃತಿ ಪಬ್ಲಿಕ್ ಶಾಲೆಯಲ್ಲಿ ವಸ್ತು ಪ್ರದರ್ಶನ

Jagruti Public School
Published on

ಬೀದರ್: ನಗರದ ಚಿದ್ರಿಯ ಬಂದೆ ನವಾಜ್ ಕಾಲೊನಿಯಲ್ಲಿ ಇರುವ ಜಾಗೃತಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ವಸ್ತು ಪ್ರದರ್ಶನ ನಡೆಯಿತು.
ವಿದ್ಯಾರ್ಥಿಗಳು ಖುದ್ದು ತಯಾರಿಸಿದ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಸೇರಿದಂತೆ ವಿವಿಧ ವಿಷಯಗಳ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.
ಮಕ್ಕಳು ಹಾಗೂ ಪಾಲಕರು ಪ್ರದರ್ಶನ ವೀಕ್ಷಿಸಿ ಸಂತಸ ಪಟ್ಟರು.
ಶಾಲೆಯ ಅಧ್ಯಕ್ಷ ತುಕಾರಾಮ ಚಿಮಕೋಡ್, ಉಪಾಧ್ಯಕ್ಷೆ ರತ್ನಮ್ಮ, ಮುಖ್ಯಶಿಕ್ಷಕಿ ಶಿಲ್ಪಾ ತುಕಾರಾಮ, ಪ್ರಮುಖರಾದ ಬಾಬುರಾವ್ ಟೊಳ್ಳೆ, ಮಹಾದೇವಿ, ಶಿಲ್ಪಾ ಸಿದ್ದು, ದ್ರೌಪದಿ, ಲೋಕೇಶ ಪಾಟೀಲ, ಪ್ರಕಾಶ ಶಾಲೆ, ವೆಂಕಟ ಅಬ್ಬೆಂದೆ, ತುಕಾರಾಮ ಗಾದಗಿ, ಮುಧಕರ, ಆಶಾ, ಅಪೂರ್ವ, ವೈಶಾಲಿ, ರಮೇಶ, ಮಹೆಬೂಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net