

ಬಸವಕಲ್ಯಾಣ: ವಿಶ್ವಗುರು ಬಸವಣ್ಣನವರು ಕರುಣಿಸಿದ ಇಷ್ಟಲಿಂಗ ಯೋಗದಿಂದ ನಮ್ಮ ಜೀವನದಲ್ಲಿ ಶಾಂತಿ, ಸಮಾಧಾನ ನೆಲೆಸಲು ಸಾಧ್ಯವಿದೆ ಎಂದು ಅನುಭವ ಮಂಟಪ ಟ್ರಸ್ಟ್ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಹೇಳಿದರು.
ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾರ್ಗದರ್ಶನದಲ್ಲಿ ಇಲ್ಲಿನ ಅನುಭವ ಮಂಟಪ ಆವರಣದಲ್ಲಿ ಏರ್ಪಡಿಸಿದ್ದ ತಿಂಗಳ ಅನುಭವ ಮಂಟಪ-27 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಷ್ಟಲಿಂಗ ಯೋಗದಿಂದ ಪರಮಾತ್ಮನ ಕರುಣೆ ದೊರೆಯುತ್ತದೆ. ಮನಸ್ಸಿಗೆ ನೆಮ್ಮದಿ ಸಿಗಲಿದೆ. ಬಸವಾದಿ ಶರಣರು ಲಿಂಗಾನುಭವ ಪಡೆದು ವಚನ ಸಾಹಿತ್ಯವನ್ನು ನಮಗೆ ನೀಡಿದ್ದಾರೆ. ಶರಣರ ವಚನಗಳ ಅಧ್ಯಯನ ನಮ್ಮ ಬದುಕಿನ ಭಾಗವಾಗಬೇಕು ಎಂದು ಆಶಿಸಿದರು.
ಪೂಜ್ಯ ಮಾತೆ ಸುಗುಣಾತಾಯಿ ಅನುಭಾವ ನೀಡಿ, ನಾವು ಮಾನವರಾಗಿ ಜನ್ಮ ತಾಳಿದ್ದರಿಂದ ಪರಮಾತ್ಮನ ಮೇಲೆ ಭಕ್ತಿ ಇಡಬೇಕು. ಭಕ್ತಿಯಿಂದ ಪರಮಾತ್ಮನ ಕರುಣೆ ಆಗುತ್ತದೆ. ಭಕ್ತಿಯೇ ನಿಜವಾದ ಶಕ್ತಿ ಎಂದರು.
ಪೂಜ್ಯ ಮಾತೆ ಅನ್ನಪೂರ್ಣ, ಮಾತೆ ಕಲ್ಯಾಣಮ್ಮ ತಾಯಿ ಸಮ್ಮುಖ, ಮಹಾದೇವಪ್ಪ ಇಜಾರೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನೀಲಕಂಠಯ್ಯ ಸ್ವಾಮಿ, ಭದ್ರಪ್ಪ ವಡ್ಡೆ, ಶಂಕರ ಮದರಗೈ, ಪ್ರಭುಶೆಟ್ಟಿ, ಸಚಿನ್ ಕೌಟೆ, ದೇವರಾಜ ಎಚ್., ಶ್ರೀನಿವಾಸ ಬಿರಾದಾರ, ರಾಣಿ ವಡ್ಡೆ, ಶರಣಮ್ಮ ಮದರಗೈ, ಅಂಕಿತಾ ಬಿರಾದಾರ, ಭಾಗಮ್ಮ, ಶಿವಲಿಂಗಮ್ಮ ತಾಳಮಡಗಿ ಇತರರಿದ್ದರು. ಮಲ್ಲಿಕಾರ್ಜುನ ಅಲಗೂಡೆ ನಿರೂಪಣೆ ಮಾಡಿದರು.