ವಿಚ್ಛೇದನಕ್ಕೆ ಬಂದು ಒಂದಾದ ದಂಪತಿ

Aurad Court
Published on

ಔರಾದ್: ಪರಸ್ಪರ ಮನಸ್ತಾಪದಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ನ್ಯಾಯಾಧೀಶರು ಹಾಗೂ ವಕೀಲರ ಸಲಹೆಯಂತೆ ಮತ್ತೆ ನೆಮ್ಮದಿ ದಾಂಪತ್ಯ ಜೀವನ ನಡೆಸಲು ಒಂದಾದರು.
ಪಟ್ಟಣದ ಕೋಟ್೯ನಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಕೌಟುಂಬಿಕ ಸಮಸ್ಯೆ ಕಾರಣ ವಿಚ್ಛೇದನಕ್ಕೆ ಬಂದಿದ್ದ ಚಿಂತಾಕಿ ಗ್ರಾಮದ ಮಾರುತಿ ಮತ್ತು ಶ್ರೀದೇವಿ ದಂಪತಿ ನ್ಯಾಯಾಧೀಶರ ಸೂಕ್ತ ಸಲಹೆ ಮೇರೆಗೆ ಒಂದಾಗಿ ಪರಸ್ಪರ ಹಾರ ಬದಲಾಯಿಸಿಕೊಂಡರು.
ಚಿಂತಾಕಿಯ ನಾಗಪ್ಪ ವಡಿಯಾರ್ ಪುತ್ರ ಮಾರುತಿ ಮತ್ತು ಕರಂಜಿ(ಬಿ)ಯ ಸುಭಾಷ ವಡಿಯಾರ್ ಪುತ್ರಿ ಶ್ರೀದೇವಿ ಮದುವೆ 2021ರ ಜೂನ್ನಲ್ಲಿ ನಡೆದಿದ್ದು, ಮೂರು ತಿಂಗಳು ಮಾತ್ರ ಸಂಸಾರ ನಡೆಸಿದ್ದಾರೆ. ನಂತರ ದಂಪತಿ ಮಧ್ಯೆ ಉಂಟಾದ ಕಲಹದ ಕಾರಣ ಮನಸ್ತಾಪ ಬೆಳೆದು ದೂರವಾಗಿ ವಿಚ್ಛೇದನಕ್ಕಾಗಿ ಕಳೆದ ಜೂನ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಿವಿಲ್ ನ್ಯಾಯಾಧೀಶ ರವಿಬಾಬು ಚವ್ಹಾಣ್ ರಾಜಿ ಸಂಧಾನದ ಮೂಲಕ ದಂಪತಿಯನ್ನು ಒಂದು ಮಾಡಿದರು. ವಕೀಲ ಸಂದೀಪ ಮೇತ್ರೆ, ಬಾಲಾಜಿ ಕುಂಬಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net