

ಔರಾದ್: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯಿಂದ ಸಂವಿಧಾನ ರಕ್ಷಣೆಗಾಗಿ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಬೃಹತ್ ಸಮಾವೇಶ ಡಿ.15ರಂದು ಬೀದರ್ ನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಪಾಲ್ಗೊಳ್ಳಬೇಕು ಎಂದು ಸಮಿತಿ ರಾಜ್ಯ ಸಂಘಟನಾ ಸಂಚಾಲಕ, ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಕೋರಿದರು.
ಸಂತಪುರದಲ್ಲಿ ಸಮಾವೇಶದ ಪೋಸ್ಟರ್ ಬಿಡುಗಡೆ ಮಾಡಿದ ಅವರು, ಬಾಬಾ ಸಾಹೇಬರು ಅತ್ಯುತ್ತಮ ಸಂವಿಧಾನ ನೀಡಿದ್ದಾರೆ. ಆದರೆ ಅದರಲ್ಲಿನ ಮೂಲ ಆಶಯಗಳು ಈವರೆಗೆ ಪೂರ್ಣವಾಗಿ ಜಾರಿಗೆ ತಂದಿಲ್ಲ. ಹೀಗಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಮುಖರಾದ ರಾಜಕುಮಾರ ಬನ್ನೇರ್, ಬಸವರಾಜ ಸಾಗರ, ಸುಧಾಕರ ಮಾಳಗೆ, ಮಾರುತಿ ಜಗದಾಳೆ, ರಾಜಕುಮಾರ ಶೇರಿಕಾರ, ತುಕಾರಾಮ ಹಸನ್ಮುಖಿ, ವಿಲಾಸ, ಪ್ರಭು ಬಾಚೆಪಳ್ಳಿ, ಸೋಪಾನರಾವ, ಕಂಟೆಪ್ಪ, ರಾಜಕುಮಾರ ಲಕ್ಕೆ ಇತರರಿದ್ದರು.