

ಔರಾದ್: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಶಿಸ್ತಿನ ಪಾಠದ ಜತೆಗೆ ಸಂಸ್ಕಾರ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಶಿಕ್ಷಣ ಚಿಂತಕ ಡಾ.ಮಹೇಶ ಮಾಶ್ಯಾಳ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ, ಸಮನ್ವಯ ಅಧಿಕಾರಿ ಕಚೇರಿ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಘಟಕದ ಸಹಯೋಗದಡಿ ಸಂತಪುರದಲ್ಲಿ ಶನಿವಾರ ಪ್ರೌಢಶಾಲೆ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಪಾವಿತ್ರ್ಯ ಮತ್ತು ವ್ಯಕ್ತಿತ್ವ ವಿಕಸನ ವಿಷಯ ಕುರಿತ ಶೈಕ್ಷಣಿಕ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪ್ರತಿ ವಿದ್ಯಾರ್ಥಿಯ ಉಜ್ವಲ ಭವಿಷ್ಯ ನಿರ್ಮಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಇದನ್ನು ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಶಿಕ್ಷಕರಾದವರು ಮೊದಲು ಮಕ್ಕಳ ಭಾವನೆ ಅರ್ಥ ಮಾಡಿಕೊಂಡು ಪಾಠ ಮಾಡಬೇಕು. ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಪ್ರಶ್ನೆ ಮಾಡುವ ಗುಣ ಬೆಳೆಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಉದ್ಘಾಟಿಸಿ ಮಾತನಾಡಿದರು. ಡಿಡಿಪಿಐ ಸಲೀಂ ಪಾಶಾ, ಬಿಇಒ ಮಹ್ಮದ್ ಮಕ್ಸೂದ್, ಪ್ರಮುಖರಾದ ಬಾಬುರಾವ ಪಾಟೀಲ್, ಬಸವರಾಜ ಶೆಟಕಾರ, ಈಶ್ವರ ಕ್ಯಾದೆ, ಬಲಭೀಮ ಕುಲಕರ್ಣಿ, ಇನಾಯತ್ ಅಲಿ ಸೌದಾಗರ, ನಾಗೇಂದ್ರ ಬಿರಾದಾರ, ಅನೀಲಕುಮಾರ ಕಟ್ಟೆ, ಶಿವಾಜಿರಾವ, ದೀಪಕ ಕಾಂಬ್ಳೆ, ಸಂಜು ಮೇತ್ರೆ, ಸಂಜು ಕಂಟಾಳೆ, ಮಧುಕರ ಇತರರಿದ್ದರು. ಗುರುನಾಥ ದೇಶಮುಖ ಪ್ರಾಸ್ತಾವಿಕ ಮಾತನಾಡಿದರು. ರಾಜಕುಮಾರ ಡೊಂಗರೆ ಸ್ವಾಗತಿಸಿದರು. ಜಗದೇವಿ ಜ್ಯಾಂತಿಕರ್ ಸ್ವಾಗತಿಸಿದರು. ಕೃಷ್ಣಕುಮಾರ ಪಾಟೀಲ್, ವಿಶ್ವನಾಥ ಬಿರಾದಾರ ನಿರೂಪಣೆ ಮಾಡಿದರು.
ಮೂರು ದಶಕದ ಹಿಂದೆ ನಾನು ಶೇ.50 ಅಂಕ ಪಡೆದು ಉತ್ತೀರ್ಣವಾದರೂ ವೈದ್ಯಕೀಯ ಸೀಟು ಸಿಕ್ಕಿದೆ. ಆದರೆ ಇಂದಿನ ಶಿಕ್ಷಣದಲ್ಲಿ ಅತ್ಯಂತ ಕಠಿಣ ಪರಿಶ್ರಮ, ಸ್ಪಧರ್ೆ ಇದೆ. ಮಕ್ಕಳ ಪ್ರತಿಭೆ ಬೆಳಕಿಗೆ ತರುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ.| ಡಾ.ಚಂದ್ರಶೇಖರ ಪಾಟೀಲ್ವಿಧಾನ ಪರಿಷತ್ ಸದಸ್ಯ