ಸಂವಿಧಾನ ದುರ್ಬಲಗೊಳಿಸುವ ಷಡ್ಯಂತ್ರ ಸಹಿಸಲ್ಲ

dss
Published on

ಬೀದರ್: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದೆ. ಆದರೂ ಸಂವಿಧಾನದ ಮೂಲ ಆಶಯ ಜಾರಿಗೆ ಬರದಿರುವುದು ದುರದೃಷ್ಟಕರ. ಇಂದಿಗೂ ದಲಿತರ ಸ್ಥಿತಿ ಗಂಭೀರವಾಗಿದೆ. ಇಂಥದರಲ್ಲಿ ಕೆಲವರಿಂದ ಸಂವಿಧಾನ ದುರ್ಬಲಗೊಳಿಸುವ ಷಡ್ಯಂತ್ರ ನಡೆದಿದೆ. ಈ ಬಗ್ಗೆ ಎಲ್ಲರೂ ಎಚ್ಚರಗೊಂಡು ಇಂತಹ ಪಿತೂರಿ ವಿಫಲಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಘಟನಾ ಸಂಚಾಲಕ, ಹುಮನಾಬಾದ್ ತಾಪಂ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಹೇಳಿದರು.
ಸಮಿತಿಯಿಂದ ಡಿ.15ರಂದು ನಗರದ ರಂಗಮಂದಿರದಲ್ಲಿ ಹಮ್ಮಿಕೊಂಡ ಸಂವಿಧಾನ ರಕ್ಷಣೆಗಾಗಿ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಬೃಹತ್ ಸಮಾವೇಶ ನಿಮಿತ್ತ ಇಲ್ಲಿನ ಡಾ.ಅಂಬೇಡ್ಕರ್ ವೃತ್ತ ಹತ್ತಿರ ಪೋಸ್ಟರ್ ಬಿಡುಗಡೆ ವೇಳೆ ಮಾತನಾಡಿದ ಅವರು, ಸಂವಿಧಾನ ರಕ್ಷಿಸಲು, ಪ್ರಜಾಪ್ರಭುತ್ವ ಉಳಿಸಲು ಜನಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಲಾಗಿದೆ. ನಾಡಿನ ಅನೇಕ ಚಿಂತಕರು, ಗಣ್ಯರು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ಪತ್ರಕರ್ತ ಸದಾನಂದ ಜೋಶಿ ಪೋಸ್ಟರ್ ಬಿಡುಗಡೆ ಮಾತನಾಡಿ, ಡಾ.ಅಂಬೇಡ್ಕರ್ ಅವರು ವಿಶ್ವದಲ್ಲೇ ದೊಡ್ಡ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ದೇಶದ ಹೃದಯವಾದ ಇದನ್ನು ಜೋಪಾನವಾಗಿ ಇಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸಮಾಜದ ಕಟ್ಟೆಕಡೆ ವ್ಯಕ್ತಿಗೂ ನ್ಯಾಯ ಕಲ್ಪಿಸುವ ಸಂವಿಧಾನ ಎಲ್ಲರಿಗೂ ಪೂಜನೀಯ. ಸರ್ವ ಸಮಾಜದ ಹಿತ ಕಾಪಾಡುವಂಥ ಶಕ್ತಿ ಸಂವಿಧಾನಕ್ಕೆ ಮಾತ್ರ ಇದೆ. ಸಂವಿಧಾನ ಆಶಯಗಳು ಸಂಪೂರ್ಣ ಈಡೇರಿದಾಗ ಭಾರತ ವಿಶ್ವಗುರು ಆಗುವ ಕಾಲ ಸನ್ನಿಹಿತವಾಗಲಿದೆ ಎಂದರು.
ಪರಿಶಿಷ್ಟರು ಮಾತ್ರವಲ್ಲ ಹಿಂದುಳಿದವರನ್ನು ಮೇಲೆತ್ತಲು ಅಂಬೇಡ್ಕರ್ ಶ್ರಮಿಸಿದ್ದಾರೆ. ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮೀಸಲಾತಿ ಕಲ್ಪಿಸಿದರು. ಇಂದು ಎಸ್ಸಿಗೆ ಶೇ.15, ಎಸ್ಟಿಗೆ ಶೇ.3 ಮೀಸಲಾತಿಯಿದೆ. ಶೇ.32 ಮೀಸಲಾತಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಸಿಗುತ್ತಿದೆ. ಮೇಲ್ವರ್ಗದ ಆರ್ಥಿಕ ಹಿಂದುಳಿದವರಿಗೂ ಶೇ.10 ಮೀಸಲಾತಿ ಕಲ್ಪಿಸಲಾಗಿದೆ. ಅಂದರೆ ಪರಿಶಿಷ್ಟೇತರರಿಗೆ ಶೇ.42 ಮೀಸಲು ಸೌಲಭ್ಯ ಸಿಗಲು ಅಂಬೇಡ್ಕರರ ದೂರದೃಷ್ಟಿ ಮುಖ್ಯ ಕಾರಣ. ಹೀಗಾಗಿ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಪ್ರಯತ್ನ ಯಾರೂ ಮಾಡಕೂಡದು. ಮಹಾಪುರುಷರನ್ನು ಜಾತಿ ಬದಲು ಅವರ ವಿಚಾರ, ಚಿಂತನೆಗಳಿಂದ ಗೌರವಿಸಬೇಕು ಎಂದು ಕರೆ ನೀಡಿದರು.
ಹಿರಿಯ ದಲಿತ ಮುಖಂಡ ಮಾರುತಿ ಬೌದ್ಧೆ ಮಾತನಾಡಿ, ಅನೇಕ ಕಷ್ಟ, ನೋವು, ಅವಮಾನ, ಯಾತನೆ ಅನುಭವಿಸಿಯೂ ದೇಶ ಮತ್ತು ಸಮಾಜಕ್ಕೆ ಅಂಬೇಡ್ಕರ್ ಸಮಪರ್ಿಸಿಕೊಂಡು ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಕೆಲವರು ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ಉಳಿದರೆ ಮಾತ್ರ ದೇಶ ಸದೃಢ, ಸಬಲವಿರಲಿದೆ ಎಂದರು.
ದಸಂಸ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಸಾಗರ, ವಿಭಾಗೀಯ ಸಂಘಟನಾ ಸಂಚಾಲಕ ರಾಜಕುಮಾರ ಬನ್ನೇರ, ಪ್ರಮುಖರಾದ ಮಾಳಪ್ಪ ಅಡಸಾರೆ, ರಘುನಾಥರಾವ ಗಾಯಕವಾಡ, ಅಂಬಾದಾಸ ಗಾಯಕವಾಡ, ಸುಧಾಕರ ಮಾಳಗೆ, ಮಾರುತಿ ಸಿಂಧೆ, ಉಮೇಶಕುಮಾರ ಸ್ವಾರಳ್ಳಿಕರ್, ರಮೇಶ ಮಂದಕನಳ್ಳಿ, ಸೂರ್ಯಕಾಂತ ಸಾಧುರೆ, ಗೋಪಾಲ್ ಸಾಗರ, ಅಹ್ಮದ್ ಅಲಿಯಾಬಾದ್, ಗಾಲಿಬ್ ಹಾಸ್ಮಿ, ಖಲೀಲ್ಮಿಯಾ ಮರಖಲ್, ರಮೇಶ ಬಂಧು, ಬಾಬುರಾವ ಮಾಲೆ, ಸುಭಾಷ ಜ್ಯೋತಿ, ಲಕ್ಷ್ಮೀ ದಂಡಿನ್, ರಂಜಿತಾ ಜೈನೂರ, ಅರ್ಚನಾ ಕೋಣಿ, ನಿತಿನಕುಮಾರ ಹೊಸಮನಿ, ಶಾವುರಾಜ ಡಾಕುಳಗಿ, ತುಕಾರಾಮ ಲಾಡಕರ್, ವಿಠಲ್ ಲಾಡಕರ್, ಸಂಜುಕುಮಾರ ಬ್ಯಾಗಿ ಇತರರಿದ್ದರು.

ಕೋಟ್ಕಾಂತರಾಜು ವರದಿ, ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿ, ಎಸ್ಸಿ-ಎಸ್ಟಿ ಯೋಜನೆ ಸರ್ಕಾರದ ಫಲಾನುಭವಿಗಳ, ವಿದ್ಯಾರ್ಥಿ ವೇತನಕ್ಕೆ ನಿಗದಿಪಡಿಸಿದ ಆದಾಯ ಮಿತಿ ರದ್ದುಗೊಳಿಸಬೇಕೆಂಬ ಹಕ್ಕೊತ್ತಾಯ ಸಮಾವೇಶದಲ್ಲಿ ಮಂಡಿಸಲಾಗುವುದು.| ರಮೇಶ ಡಾಕುಳಗಿಸಮಾವೇಶ ಆಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net