

ಬೀದರ್: ಶಾಲೆ ಬಿಟ್ಟ 15 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಹಾಗೂ ನಿರುದ್ಯೋಗಿಗಳಿಗೆ ಒಂದು ವರ್ಷದ ವಸತಿ ಸಹಿತ ವಿವಿಧ ಉಚಿತ ಕೌಶಲ ತರಬೇತಿಯ ಅರ್ಜಿ ಸಲ್ಲಿಕೆ ಅವಧಿಯನ್ನು ಇಲ್ಲಿಯ ಸಿದ್ಧೇಶ್ವರ ಟ್ರಸ್ಟ್ ವಿಸ್ತರಿಸಿದೆ.
ಮೆಡಿಕಲ್ ರಿಪ್ರೆಸೆಂಟೆಟಿವ್, ಪ್ಯಾರಾ ಮೆಡಿಕಲ್, ಫಿಸಿಯೊ ಥೆರಪಿಸ್ಟ್, ಲ್ಯಾಬ್, ರೆಡಿಯೊಲಾಜಿ, ಎಕ್ಸ್‍ರೇ ಅಸಿಸ್ಟಂಟ್, ಬೆಸಿಕ್ ಕಂಪ್ಯೂಟರ್, ಮೊಬೈಲ್, ಎಸಿ, ಫ್ರಿಡ್ಜ್ ದುರಸ್ತಿ, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಬೈಕ್, ಕಾರ್ ಮೆಕ್ಯಾನಿಕ್, ವೆಲ್ಡರ್, ಕಸೂತಿ, ಫೊಟೊಗ್ರಫಿ, ಸಂಗೀತ, ನೃತ್ಯ, ಕಾರ್ಪೆಂಟರ್, ಹೊಲಿಗೆ, ಟಿಫಿನ್ ಸೆಂಟರ್, ಫುಡ್ ಪ್ರೊಸೆಸ್, ಪಾನಿ ಪುರಿ, ಜ್ಯೂಸ್, ಇಡ್ಲಿ-ವಡೆ ತಯಾರಿಕೆ ತರಬೇತಿಗೆ ಡಿಸೆಂಬರ್ 30 ರ ವರೆಗೆ ಅರ್ಜಿ ಸಲ್ಲಿಸಬಹುದು ಎಂದು ಟ್ರಸ್ಟ್ ಅಧ್ಯಕ್ಷ ಶಶಿಕಾಂತ ಮೋದಿ ತಿಳಿಸಿದ್ದಾರೆ.
15 ರಿಂದ 21 ವರ್ಷದ ಒಳಗಿನ ಅಭ್ಯರ್ಥಿಗಳು ತರಬೇತಿಗೆ ನಗರದ ನಂದಿ ಕಾಲೊನಿಯಲ್ಲಿ ಇರುವ ಟ್ರಸ್ಟ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಡುವ ದಿಸೆಯಲ್ಲಿ ಉಚಿತ ತರಬೇತಿ ಕೊಡಲಾಗುತ್ತಿದೆ. ತರಬೇತಿ ಅವಧಿ ಪೂರ್ಣಗೊಂಡ ನಂತರ ಉದ್ಯೋಗ ದೊರಕಿಸಿಕೊಡಲು ಸಹ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9448400365ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.