

ಬೀದರ್: ಡಾ. ಶಿವಕುಮಾರ ಸ್ವಾಮೀಜಿ ಅವರ ಮೂರು ದಿನಗಳ 80ನೇ ಜಯಂತಿ ಮಹೋತ್ಸವ ಇಲ್ಲಿಯ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಶ್ರದ್ಧೆ, ಭಕ್ತಿ ನಡುವೆ ಸಮಾರೋಪಗೊಂಡಿತು.
ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಪಾದಪೂಜೆ ಮಾಡಿದರು. ಅನೇಕರು ನಾಣ್ಯಗಳಿಂದ ತುಲಾಭಾರ ಮಾಡಿ ಭಕ್ತಿ ಸಮರ್ಪಿಸಿದರು.
ಅಶಾಂತಿಗೆ ಅಹಂಕಾರ ಕಾರಣ: ಮನುಷ್ಯನಿಗೆ ಶಾಂತಿ ಸಿಗದಿದ್ದಕ್ಕೆ ನಾನು ಎನ್ನುವ ಅಹಂಕಾರವೇ ಕಾರಣ ಎಂದು ಸಾನಿಧ್ಯ ವಹಿಸಿ ಮಾತನಾಡಿದ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ನುಡಿದರು.
ನಾನು ಮಾಡಿದೆನೆಂಬ ಭಾವ ಬಂದರೆ ಪಡೆದ ಪುಣ್ಯವೆಲ್ಲವೂ ಹಾಳಾಗುತ್ತದೆ. ದಾನ, ಧರ್ಮ ಮಾಡಿದರೂ ಶಾಂತಿ, ಸಮಾಧಾನ ಸಿಗುವುದಿಲ್ಲ ಎಂದು ಹೇಳಿದರು.
ಅಹಂಕಾರ ಬಿಟ್ಟು ಬಾಗಿದ ತಲೆ ಮುಗಿದ ಕೈಯಿಂದ ಭಕ್ತಿ ಸಮರ್ಪಿಸಿದರೆ ಸದ್ಗುರುವಿನ ಕೃಪೆಯಾಗುತ್ತದೆ ಎಂದರು.
ಮನುಷ್ಯ ಏನೇ ಮಾಡಿದರೂ ಮನಸ್ಸು ಪರಮಾತ್ಮನಲ್ಲಿ ಇಡಬೇಕು. ಮಠದಲ್ಲಿ ಕುಳಿತು, ಮನಸ್ಸು ಮನೆಯಲ್ಲಿದ್ದರೆ ಅದು ಭಕ್ತಿ ಆಗದು. ಮನಸ್ಸನ್ನು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಬೇಕು ಎಂದು ಹೇಳಿದರು.
ಕಲಬುರಗಿಯ ಮಾತೆ ಲಕ್ಷ್ಮಿದೇವಿ, ಪರಮಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ಗಣೇಶಾನಂದ ಸ್ವಾಮೀಜಿ, ಅದ್ವೈತಾನಂದ ಸ್ವಾಮೀಜಿ, ಸದ್ರೂಪಾನಂದ ಸ್ವಾಮೀಜಿ, ಮಾತೆ ಸಿದ್ಧೇಶ್ವರಿ, ಮಾತೆ ಸಂಗೀತಾದೇವಿ, ಮಾತೆ ಜ್ಞಾನೇಶ್ವರಿ, ಮಾತೆ ಸುಶಾಂತಾ, ಗೋಪಾಲ್ ಶಾಸ್ತ್ರಿ ಸಮ್ಮುಖ ವಹಿಸಿದ್ದರು.
ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಡಾ. ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ, ಬಿ.ಜಿ. ಶೆಟಕಾರ್, ಪ್ರಭುಶೆಟ್ಟಿ ಮುದ್ದಾ, ಶಿವಶರಣಪ್ಪ ಸಾವಳಗಿ, ಸುಭಾಷ್ ಉಪ್ಪೆ, ಕರಬಸಪ್ಪ ಮುಸ್ತಾಪುರೆ, ಮಡಿವಾಳಪ್ಪ ಗಂಗಶೆಟ್ಟಿ, ಉದಯಭಾನು ಹಲವಾಯಿ, ಶರಣಪ್ಪ ತಿರ್ಲಾಪುರೆ, ಈಶ್ವರಗೌಡ ಕಮಡಳ್ಳಿ, ಭಾರತಿಬಾಯಿ ಕಣಜಿ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಪ್ರಮುಖರಾದ ಕಲ್ಯಾಣರಾವ್, ಬುಜುರ್ಕೆ, ಸಹಜಾನಂದ ಕಂದಗೂಳ್, ಪ್ರಭು ಬೆಣ್ಣೆ, ವಿರೂಪಾಕ್ಷ ಗಾದಗಿ, ಶರಣಪ್ಪ ಹೊಸಮನಿ, ಲಕ್ಷ್ಮಣ ಪೂಜಾರಿ, ಬಸವರಾಜ ಮ್ಯಾಗೇರಿ, ನಾಗಪ್ಪ ಜಾನಕನೋರ, ಡಾ. ಚಂದ್ರಪ್ಪ ಭತಮುರ್ಗೆ ಇದ್ದರು. ಸಾಧಕ ವಿನಾಯಕ ನಿರೂಪಿಸಿದರು.