

ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ಫೋಟ್೯ ಬೆಳ್ಳಿ ಹಬ್ಬವನ್ನು ವಿವಿಧ ಸಾಮಾಜಿಕ ಚಟುವಟಿಕೆಗಳೊಂದಿಗೆ ಇಲ್ಲಿನ ರಂಗಮಂದಿರದಲ್ಲಿ ಇತ್ತೀಚೆಗೆ ಎರಡು ದಿನ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಸ್ ಸೌಕರ್ಯವಿಲ್ಲದ ಗ್ರಾಮಗಳ 180 ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಉಚಿತ ಬೈಸಿಕಲ್ ವಿತರಣೆ, ಪರಿಸರ ಸಂರಕ್ಷಣೆ ಹಾಗೂ ಇಂಧನ ಉಳಿತಾಯ ಜಾಗೃತಿಗಾಗಿ ಸೈಕಲ್ ರ್ಯಾಲಿ, ಏಳು ಕ್ಷೇತ್ರಗಳಲ್ಲಿ ಸೇವಾ ಕಾರ್ಯ ಕೈಗೊಳ್ಳಲು ಸಪ್ತ ಸಂಕಲ್ಪ ಮಾಡಲಾಯಿತು.
ಬಹು ಜಿಲ್ಲಾ ವಿಚಾರ ಸಂಕಿರಣದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ, ಮೂಲ ಶಿಕ್ಷಣ ಹಾಗೂ ಸಾಕ್ಷರತೆ, ನೀರು, ಶೌಚಗೃಹ ಮತ್ತು ಸ್ವಚ್ಛತೆ, ಆರ್ಥಿಕ ಮತ್ತು ಸಮುದಾಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಶಾಂತಿ ನೆಲೆಸುವಿಕೆ ಮತ್ತು ಸಂಘರ್ಷ ತಡೆಯುವಿಕೆ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಕುರಿತು ವಿವಿಧ ಭಾಗಗಳ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ಮಂಡಿಸಿದರು.
ಅಂತಾರಾಷ್ಟ್ರೀಯ ರೋಟರಿ ಜಿಲ್ಲೆ ಸೆವನ್ ಏರಿಯಾಸ್ ಆಫ್ ಫೋಕಸ್ ಅಧ್ಯಕ್ಷ ಬಸವರಾಜ ಧನ್ನೂರ ನೇತೃತ್ವದಲ್ಲಿ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ಹೆಸರಿನಲ್ಲಿ ಹೊಸ ಕ್ಲಬ್ ರಚಿಸಲಾಯಿತು. ಪರಿಸರ ಸ್ನೇಹಿ ಜೀವನ ಶೈಲಿ ಎಲ್ಲರೂ ರೂಢಿಸಿಕೊಳ್ಳಬೇಕು. ಪ್ರತಿ ಸೋಮವಾರ ತಮ್ಮ ಕಚೇರಿ ಕೆಲಸಕ್ಕೆ ಸೈಕಲ್ ಬಳಸಬೇಕು ಎಂದು ಸಲಹೆ ನೀಡಲಾಯಿತು. ಭವ್ಯ ರೋಟರಿ ಭವನ ನಿರ್ಮಾಣಕ್ಕೆ ಬೀದರ್ ನಗರಾಭಿವೃದ್ಧಿ ಪ್ರಾಕಾರದಿಂದ ಸಿಎ ಸೈಟ್ ಹಂಚಿಕೆ ಮಾಡುವಂತೆ ಬೇಡಿಕೆ ಮಂಡಿಸಲಾಯಿತು.
ವಿಜಯಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ನಿರ್ಭಯಾನಂದ ಸರಸ್ವತಿ ಮಹಾರಾಜ ವಿಶೇಷ ಉಪನ್ಯಾಸ ನೀಡಿದರು. ಕೇಂದ್ರ ಸಚಿವ ಭಗವಂತ ಖೂಬಾ, ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಡಿಸಿ ಗೋವಿಂದರೆಡ್ಡಿ, ಎಸ್ಪಿ ಚನ್ನಬಸವಣ್ಣ ಲಂಗೋಟಿ, ಡಿಎಫ್ಒ ವಾನತಿ, ರೋಟರಿ ಜಿಲ್ಲಾ ಗವರ್ನರ್ ಮಾಣಿಕ ಪವಾರ್, ವಿಚಾರ ಸಂಕಿರಣದ ಅಧ್ಯಕ್ಷ ಡಾ.ರಘು ಕೃಷ್ಣಮೂರ್ತಿ, ಪ್ರಮುಖರಾದ ಸಂಗಮೇಶ ಆಣದೂರೆ, ಗುಂಡಪ್ಪ ಘೋದೆ, ಚಂದ್ರಕಾಂತ ಕಾಡಾದಿ, ಡಾ.ಕಪಿಲ್ ಪಾಟೀಲ್, ವೀರೇಶ ಕುಂಬಾರ, ಡಾ.ವಿಲಾಸ ಕನಸೆ, ರುಚಿಕಾ ಶಹಾ, ಚಂದ್ರಶೇಖರ ಎಮ್ಮೆ, ನಾಗರಾಜ ಕರ್ಪೂರ್, ಅನೀತಾ ಚಿಂತಾಮಣಿ, ಪುನೀತ್ ಸಿಂಗ್, ಸೋಮಶೇಖರ ಪಾಟೀಲ್, ಶಿವಕುಮಾರ ಪಾಖಾಲ್, ಡಾ.ಆನಂದ ಪಾಟೀಲ್, ಸಾಗರ ನಾಯಕ್, ಡಾ.ಸಂಧ್ಯಾರಡ್ಡಿ, ಜಗದೀಶ ಖಂಡ್ರೆ, ಅಭಿಷೇಕ್ ಚಿದ್ರಿ, ಕವಿತಾ ಪ್ರಭಾ, ಪೂಜಾ ಜಾಜ್೯ ಇತರರಿದ್ದರು.
ರೋಟರಿ ಬೀದರ್ ಫೋಟ್೯ ಬೆಳ್ಳಿ ಹಬ್ಬವನ್ನು ವಿವಿಧ ಜನೋಪಯೋಗಿ ಕಾರ್ಯಗಳ ಮೂಲಕ ಮಾದರಿಯಾಗಿ ಆಚರಿಸಲಾಗಿದೆ. ಬಹು ಜಿಲ್ಲೆಗಳ ವಿಚಾರ ಸಂಕಿರಣ, ಸಪ್ತ ಕ್ಷೇತ್ರಗಳ ಸೇವೆ ಸಂಕಲ್ಪ, ಗ್ರಾಮೀಣ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ, ಹೊಸ ಕ್ಲಬ್ ರಚನೆ ಮೊದಲಾದವು ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿವೆ.| ಬಸವರಾಜ ಧನ್ನೂರರೋಟರಿ ಸೆವನ್ ಏರಿಯಾಸ್ ಆಫ್ ಫೋಕಸ್ ಅಧ್ಯಕ್ಷ