

ಭಾಲ್ಕಿ: ದೈಹಿಕ ಬೆಳವಣಿಗೆ ಹಾಗೂ ಮನಸ್ಸಿನ ಸಂತೃಪ್ತಿಗೆ ಕ್ರೀಡೆಗಳು ಪೂರಕ ಎಂದು ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಸಹಯೋಗದಡಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಂಸದರ ಕ್ರೀಡಾ ಮಹಾಮೇಳ ಮತ್ತು ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ರೀಡೆಯಲ್ಲಿ ಸಾಧನೆ ಮಾಡಲು ಪ್ರೋತ್ಸಾಹ ಅಗತ್ಯ. ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ಕ್ರೀಡೆಗಳ ಉತ್ತೇಜನಕ್ಕೆ, ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ವಿಶೇಷ ಯೋಜನೆ ರೂಪಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಶಿವರಾಜ ಕಣಜಿ ಮಾತನಾಡಿ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರು.
ದೈಹಿಕ ಶಿಕ್ಷಣ ಪರಿವೀಕ್ಷಕ ರೋಹಿದಾಸ ರಾಠೋಡ್ ಮಾತನಾಡಿದರು. ಸಂಸದರ ಆಪ್ತ ಕಾರ್ಯದರ್ಶಿ ಅಮರ ಹಿರೇಮಠ, ಗುರುಕುಲ ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ದೈಹಿಕ ಶಿಕ್ಷಣ ಶಿಕ್ಷರ ಸಂಘದ ತಾಲೂಕು ಅಧ್ಯಕ್ಷ ಹಣಮಂತ ಕಾರಾಮುಂಗೆ, ಪ್ರಮುಖರಾದ ಸುಭಾಷ ಇಟಗೆ, ವಿಜಯಕುಮಾರ ಚವ್ಹಾಣ್, ಶಿವಕುಮಾರ ಎಸ್., ಅಮರ ಹಿರೇಮಠ, ಮಹೇಶ ಕುಲಕರ್ಣಿ, ಲಕ್ಷ್ಮಣ ಮೇತ್ರೆ, ಅನೀಲಕುಮಾರ ಪಾಟೀಲ್, ಚನ್ನವೀರ ಚಕ್ರಸಾಲಿ, ಕನಕ ಮಲ್ಲೇಶಿ, ಸಂತೋಷ ಪಾಟೀಲ್, ಜೈರಾಜ ಕೊಳ್ಳಾ ಇತರರಿದ್ದರು.