

ಬೀದರ್: ಯಾಕತಪುರ ಗ್ರಾಮದಲ್ಲಿ ಶ್ರೀ ಭಾಗ್ಯವಂತಿ ದೇವಿ 11ನೇ ಜಾತ್ರಾ ಮಹೋತ್ಸವ ಡಿ.8, 9ರಂದು ಜರುಗಲಿದೆ.
ಶುಕ್ರವಾರ ಬೆಳಗ್ಗೆ 8ಕ್ಕೆ ದೇವಿ ಪಾದಪೂಜೆ ಹಾಗೂ ಅಭಿಷೇಕ, ಸಂಜೆ 6ಕ್ಕೆ ದೇವಿ ಮೂರ್ತಿ ಮೆರವಣಿಗೆ, ರಾತ್ರಿ ಸಂಗೀತ ಕಾರ್ಯಕ್ರಮ ಇದೆ. ಮರುದಿನ ಬೆಳಗ್ಗೆ 8ಕ್ಕೆ ಪಲ್ಲಕ್ಕಿ ಮೆರವಣಿಗೆ. ಪುರವಂತಿಗೆ ಸೇವೆ, ಡೊಳ್ಳು ಕುಣಿತ, ಕುಂಭ ಕಳಸದೊಂದಿಗೆ ಮಹಿಳೆಯರು, ಮಕ್ಕಳೊಂದಿಗೆ ಮೆರವಣಿಗೆ ಜರುಗಲಿದೆ. ನಂತರ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜರು, ಶ್ರೀ ಡಾ.ಬಸವಲಿಂಗ ಅವಧೂತರು, ಹಜರತ್ ಸೈಯದ್ ಶಹಾ ಮುಸ್ತಫಾ ಖಾದ್ರಿ, ಸಜ್ಜಾದ್ ಶೀನರೋಜ್-ಎ-ರಹಮಾನಿಯಾ ಸಾನ್ನಿಧ್ಯ ವಹಿಸುವರು. ರಾತ್ರಿ 10ಕ್ಕೆ ಸಂಗೀತ ದರ್ಬಾರ್ ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆಯಬೇಕು ಎಂದು ಭೀಮರಾವ ಬೀದರಕರ್ ಕೋರಿದ್ದಾರೆ.