

ಬೀದರ್: ಶ್ರೀ ಸಿದ್ಧಾರ್ಥ ಅಸೋಸಿಯೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೌಬಾದ್ ನ ಜೈಭೀಮ ನಗರದ ಬೌದ್ಧ ಮಂದಿರದಲ್ಲಿ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಹಿರಿಯ ಕಲಾವಿದ ರಮೇಶ ದೊಡ್ಡಿ ಮತ್ತು ಸಂಗಡಿಗರು ಸುಗಮ ಸಂಗೀತ ನಡೆಸಿಕೊಟ್ಟರೆ, ಕಲಾವಿದೆ ಸುರೇಖಾ ತಂಡ ಜಾನಪದ ಗೀತೆ ಪ್ರಸ್ತುತಪಡಿಸಿ ಗಮನ ಸೆಳೆದರು. ರಘುನಾಥ ಗಾಯಕವಾಡ ತಬಲಾ ಸಾಥ್ ನೀಡಿದರು. ಅಸೋಸಿಯೇಷನ್ ಅಧ್ಯಕ್ಷ ಪ್ರೇಮಕುಮಾರ, ಉಪಾಧ್ಯಕ್ಷ ಅಮೃತ ಲಕ್ಕೇರಿ, ಪ್ರಮುಖರಾದ ಕಲ್ಲಪ್ಪ ಗಾಯಕವಾಡ, ತಿಪ್ಪಣ್ಣ, ಮನೋಹರರಾವ ಇತರರಿದ್ದರು.