ವ್ಯಕ್ತಿತ್ವ ವಿಕಸನ ಕಾರ್ಯಾಗಾರ 9ಕ್ಕೆ

Dr Mahesh Mashal
Published on

ಔರಾದ್: ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಿಂದ ಸಂತಪುರ ಗ್ರಾಮದ ಭಾರತ ಕಲ್ಯಾಣ ಮಂಟಪದಲ್ಲಿ ಡಿ.9ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವ್ಯಕ್ತಿತ್ವ ವಿಕಸನ ಕುರಿತು ಶೈಕ್ಷಣಿಕ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಬಿಇಒ ಮಹ್ಮದ್ ಮಕ್ಸೂದ್ ತಿಳಿಸಿದ್ದಾರೆ.
ಧಾರವಾಡದ ಚಿಂತಕ ಡಾ.ಮಹೇಶ ಮಾಶಾಳ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಪ್ರೌಢ ಶಾಲಾ ಶಿಕ್ಷಕರಿಗೆ ಓಓಡಿ ಸೌಲಭ್ಯ ನೀಡಲಾಗಿದೆ. ಹೀಗಾಗಿ ಔರಾದ್ ಮತ್ತು ಕಮಲನಗರ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢ ಶಾಲೆ ಶಿಕ್ಷಕರು ಕಡ್ಡಾಯವಾಗಿ ಹಾಜರಾಗಬೇಕು. ಎಲ್ಲ ಶಿಕ್ಷಣ ಸಂಯೋಜಕರು, ಅಧಿಕಾರಿಗಳು ಭಾಗವಹಿಸುವ ಮೂಲಕ ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net