

ಬೀದರ್: ನಗರದ ಉದಗೀರ್ ರಸ್ತೆಯಿಂದ ಹಳೇ ಆರ್.ಟಿಒ ಕಚೇರಿ ಮೂಲಕ ಚಿದ್ರಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾರ್ಯ ಬೇಗ ಕೈಗೆತ್ತಿಕೊಳ್ಳಲು ಬೀದರ್ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶಟಕಾರ್, ಕಾರ್ಯದರ್ಶಿ ಡಾ.ವೀರೇಂದ್ರ ಶಾಸ್ತ್ರಿ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರಿಗೆ ಪತ್ರ ಬರೆದಿರುವ ಅವರು, ಈ ಮಾರ್ಗ ನಿರ್ಮಾಣ ಸಂಬಂಧ ವಾಯುಪಡೆ ತರಬೇತಿ ಕೇಂದ್ರದವರು 31 ಗುಂಟೆ ಜಾಗ ಬಿಟ್ಟುಕೊಡಲು ಒಪ್ಪಿದ್ದಾರೆ. ಜಿಲ್ಲಾಡಳಿತ ಸಹ ವಾಯುಪಡೆಯವರಿಗೆ ಪರ್ಯಾಯ ಜಾಗ ನೀಡಲು ಒಪ್ಪಿದೆ. ಆದರೂ ನಿಮರ್ಾಣ ಕಾರ್ಯ ನನೆಗುದಿಗೆ ಹಾಕಿರುವುದು ಸರಿಯಲ್ಲ ಎಂದು ಗಮನ ಸೆಳೆದಿದ್ದಾರೆ.
ನಗರದ ಜನಸಂಖ್ಯೆ ಹೆಚ್ಚುತ್ತಿದ್ದು, ಈ ಮಾರ್ಗದಿಂದ ಹಾದುಹೋಗುವ ವಾಹನ ಸವಾರರ ಸಂಖ್ಯೆ ಗಣನೀಯ ಹೆಚ್ಚಿದೆ. ಆದರೆ ಇಲ್ಲಿ ಉತ್ತಮವಾದ ನೇರ ರಸ್ತೆ ಸಂಪರ್ಕ ಇಲ್ಲದ್ದರಿಂದ ಜನರು ಸುತ್ತು ಬಳಸಿ ಮಾರ್ಗ ಕ್ರಮಿಸುವ ಜತೆಗೆ ಅಪಘಾತಕ್ಕೀಡಾಗುವ ಆತಂಕವೂ ಎದುರಿಸುತ್ತಿದ್ದಾರೆ. ಈ ರಸ್ತೆ ಖಾಸಗಿ ಜಾಗದ ಬಚ್ಚಾ ಲೇಔಟ್ನಿಂದ ಹಾದು ಹೋಗುತ್ತದೆ. ಸುಗಮ ಸಂಚಾರ, ಜನರ ಹಿತದೃಷ್ಟಿಯಿಂದ ಈ ರಸ್ತೆ ನಿರ್ಮಾಣ ಕೆಲಸ ಆದ್ಯತೆ ಮೇರೆಗೆ ಕೈಗೊಳ್ಳುವ ಅಗತ್ಯವಿದೆ. ಇದರಿಂದ ಸಾರ್ವಜನಿಕರ ಜತೆ ವಾಯುಪಡೆಯವರಿಗೂ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.