67 ಜನರಿಂದ ಸ್ವಯ ಪ್ರೇರಿತ ರಕ್ತದಾನ

Blood Camp
Published on

ಬೀದರ್: ಡಾ. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ವಿವಿಧೊದ್ದೇಶ ಸಂಘದಿಂದ ನಗರದ ಹಾರೂರಗೇರಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ 67 ಜನ ರಕ್ತದಾನ ಮಾಡಿದರು.
ಸಂಘದಿಂದ ಎರಡು ವರ್ಷಗಳಿಂದ ರಕ್ತದಾನ ಶಿಬಿರದ ಮೂಲಕ ಮಹಾ ಪರಿನಿರ್ವಾಣ ದಿನವನ್ನು ಅರ್ಥಪೂರ್ಣವಾಗಿ ಆಯೋಜಿಸುತ್ತ ಬರಲಾಗುತ್ತಿದೆ. ಈ ಬಾರಿ ಕಳೆದ ಬಾರಿಗಿಂತಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಸ್ವಯಂ ಪ್ರೇರಣೆಯಿಂದ ಅಧಿಕ ಸಂಖ್ಯೆಯಲ್ಲಿ ರಕ್ತದಾನ ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷ ವಿನೋದಕುಮಾರ ಅಪ್ಪೆ ಹೇಳಿದರು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ನಗರಸಭೆ ಸದಸ್ಯ ದಿಗಂಬರ ಮಡಿವಾಳ, ಪ್ರಮುಖರಾದ ಶಂಭುರಾವ್ ಸಾಗರ್, ಶಂಕರರಾವ್ ಮಾಳಗೆ, ವಿಜಯಕುಮಾರ ಹೊಸಮನಿ, ಅರ್ಜುನ ಹಾವೆ, ಅರ್ಜುನ ಬನ್ನೇರ, ರಾಮಚಂದ್ರ ಹಿಂದೊಡ್ಡಿ, ಮಂಜುನಾಥ ಹಾವನೂರು ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net