

ಹುಮನಾಬಾದ್: ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಸಂಸ್ಕಾರಯುತ ಶಿಕ್ಷಣ ಜತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಹೊಂದಲು ಸಾಧ್ಯ ಎಂದು ರಾಜರಾಜೇಶ್ವರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ಬಸವರಾಜ ನಾಡಗೌಡ ಹೇಳಿದರು.
ಪಟ್ಟಣದ ರಾಜರಾಜೇಶ್ವರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಪಿಜಿ ಸೆಂಟರ್ ನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಬಿಎಎಂಎಸ್ ವಿದ್ಯಾರ್ಥಿಗಳ ಶಿಶೋಪನಯನ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಕನಸು ಹೊಂದಿರಬೇಕು ಹಾಗೂ ನಿಖರ ಗುರಿ, ಕಠಿಣ ಪರಿಶ್ರಮ ಪಡಬೇಕು ಎಂದರು.
ಗ್ರಾಮೀಣ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಅವರು ಕಾಲೇಜಿನಲ್ಲಿ ಹಲವಾರು ಉನ್ನತ ಕೋಸ್೯ ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಕಾಲೇಜಿನ ಡೀನ್ ಡಾ.ಶ್ರೀಜಾ, ಅಕಾಡೆಮಿ ಪ್ರಭಾರಿ ಡಾ.ರವೀಂದ್ರ ಕೊರಡೆ, ಡಾ.ನಾಗರಾಜ ಎಸ್., ಡಾ.ರವಿಕುಮಾರ ಸಿ.ಎಚ್., ಪ್ರೊ.ಪಿ.ಜಿ. ಭಟ್, ಡಾ.ಮಾಲಾಶ್ರೀ ಬಿರಾದಾರ್, ಡಾ.ಸ್ಮೀತಾ ಪಾಟೀಲ್ ಇತರರಿದ್ದರು. ರಮ್ಯಾ ನಿರೂಪಣೆ ಮಾಡಿದರು.