ಅಕ್ರಮ ಲೇಔಟ್ ವಿರುದ್ಧ ಕ್ರಮವಹಿಸಿ

5AD1
Published on

ಔರಾದ್: ಪಟ್ಟಣದ ಸುತ್ತಮುತ್ತ ಅಕ್ರಮವಾಗಿ ಲೇಔಟ್ ಗಳು ನಿರ್ಮಾಣವಾಗುತ್ತಿದ್ದು, ಸಂಬಂಧಿತರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ ದೇಶಮುಖ ಆಗ್ರಹಿಸಿದರು.
ಸರ್ಕಾರದ ನಿಯಮ ಗಾಳಿಗೆ ತೂರಿ ಯಾವುದೇ ಅನುಮತಿ ಇಲ್ಲದೆ ಸುಮಾರು 20ರಿಂದ 25 ಬಡಾವಣೆಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸರ್ಕಾರದ ನಿಯಮದ ಪ್ರಕಾರ ಲೇಔಟ್ ನಿರ್ಮಿಸಬೇಕಾದರೆ ರಸ್ತೆ, ಚರಂಡಿ, ವಿದ್ಯುತ್ ಸೇರಿ ಮೂಲಭೂತ ಸೌಲಭ್ಯ ಒದಗಿಸಬೇಕು. ಇದರ ಜತೆಯಲ್ಲಿ ಸಿಎ ಸೈಟ್ ಬಿಡಬೇಕು. ಆದರೆ ಕೆಲವರು ಯಾವ ನಿಯಮಗಳನ್ನು ಅನುಸರಿಸುತ್ತಿಲ್ಲ. ಬಹುತೇಕರು ಎನ್ಎ ಅನುಮತಿ ಪಡೆದಿಲ್ಲ. ಅಕ್ರಮ ದಂಧೆಯಲ್ಲಿ ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮಿಲು ಆಗಿದ್ದಾರೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರು ಅಕ್ರಮ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದರೆ ತೊಂದರೆ ಆಗಬಹುದು. ವಿಶೇಷ ಗಮನಹರಿಸಿ ಎಚ್ಚರಿಕೆಯಿಂದ ಇರಬೇಕು ಎಂದು ಕೋರಿದರು.
ಪಪಂ ಸದಸ್ಯ ಶಿವಾಜಿ ರಾಠೋಡ್, ಪ್ರಶಾಂತ, ಸಂತೋಷ ಖಾನಾಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net