

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ನಾಯಕ ಚಂದ್ರಾಸಿAಗ್ ಅವರು ಮಾಜಿ ಮುಖ್ಯಮಂತ್ರಿ ಡಾ. ಎನ್ ಧರ್ಮಸಿಂಗ್ ಸ್ಮಾರಕ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಿದ್ದಾರೆ.
ಡಿಸೆಂಬರ್ ೧೩ ರಿಂದ ಬೀದರ್ ನಗರದ ನೆಹರು ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರಥಮ ಬಹುಮಾನ ರೂ. ೫೦,೦೦೦ ಹಾಗೂ ಟ್ರೋಫಿ ನೀಡಲಾಗುತ್ತದೆ. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ. ೨೫,೦೦೦ ಹಾಗೂ ಟ್ರೋಫಿ ಸಿಗಲಿದೆ.
ಪಂದ್ಯಾವಳಿಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ತಂಡಗಳು ಮಾತ್ರ ಪಾಲ್ಗೊಳ್ಳಬಹುದು. ೮ ಓವರ್ ಇರಲಿದ್ದು, ೨ ಓವರ್‌ಗಳ ಪಾವರ್ ಪ್ಲೇ ಇರಲಿದೆ. ಪ್ರತಿ ಬೌಲರ್ ಎರಡು ಓವರ್ ಬೌಲ್ ಮಾಡಬಹುದು. ಫೈನಲ್ ಮತ್ತು ಸೆಮಿ ಫೈನಲ್ ಪಂದ್ಯಗಳು ೧೦ ಓವರ್‌ದ್ದಾಗಿರುತ್ತವೆ. ಉತ್ತಮ ಪ್ರದರ್ಶನ ನೀಡಿದವರಿಗೆ ಸರಣಿ ಶ್ರೇಷ್ಠ, ಪಂದ್ಯ ಶ್ರೇಷ್ಠ, ಉತ್ತಮ ಬ್ಯಾಟ್ಸ್ಮನ್, ಉತ್ತಮ ಬೌಲರ್ ಟ್ರೋಫಿ ನೀಡಲಾಗುತ್ತದೆ.
ತಂಡದ ಆಟಗಾರರು ಆಧಾರ್ ಅಥವಾ ಇತರೆ ಗುರುತಿನ ಚೀಟಿ ಹೊಂದಿರಬೇಕಾಗುತ್ತದೆ. ಪ್ರತಿ ತಂಡವು ೧೫ ಆಟಗಾರರನ್ನು ಕಡ್ಡಾಯವಾಗಿ ಒಳಗೊಂಡಿರಬೇಕು.
ಆಸಕ್ತ ತಂಡಗಳು ಡಿ. ೧೧ ರೊಳಗೆ ಪ್ರವೇಶ ಶುಲ್ಕ ೧೧೦೦ ರೂ. ಗಳೊಂದಿಗೆ ಹೆಸರು ನೋಂದಾಯಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಅಕ್ಷಯ್ (೬೩೬೩೨೦೪೩೩೨), ಇಮ್ರಾನ್ (೯೭೩೧೯೮೮೭೩೭), ಫಯಾಜ್ (೮೮೮೬೦೦೧೪೮೦), ವಿಕ್ಕಿ (೭೪೧೧೧೫೦೧೩೭) ಅವರನ್ನು ಸಂಪರ್ಕಿಬಹುದು.
ಧರ್ಮಸಿAಗ್ ಸ್ಮರಣಾರ್ಥ ಚಂದ್ರಾಸಿAಗ್ ಅವರು ಪ್ರತಿ ವರ್ಷ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸುತ್ತಿದ್ದಾರೆ. ಇದು ೭ ನೇ ಸೀಸನ್‌ನ ಟೂರ್ನಾಮೆಂಟ್ ಆಗಿದೆ. ಬೀದರ್ ದಕ್ಷಿಣ ಕ್ಷೇತ್ರದ ಕ್ರಿಕೆಟ್ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕೋರಿದ್ದಾರೆ.