ಕ್ರಿಸ್ಮಸ್ ಆಗಮನ ಕಾರ್ಯಕ್ರಮ

christmas
Published on

ಬೀದರ್: ಕ್ರಿಸ್ಮಸ್ ಹಬ್ಬದ ಆಗಮನ ಕಾರ್ಯಕ್ರಮ ವಿದ್ಯಾನಗರ ಕಾಲನಿಯ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ನಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಪಾಸ್ಟರ್ ಅಭಿಜೀತ್ ಉದ್ಘಾಟಿಸಿ ಮಾತನಾಡಿ, ಕ್ರಿಸ್ತನ ಪ್ರೀತಿ, ಶಾಂತಿಯ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಪಾಸ್ಟರ್ ನಿರ್ಮಲಾ ಸೈಮನ್, ಪಾಸ್ಟರ್ ತ್ರಿವೇಣಿ, ಬಿ.ಜಿ. ಸ್ಯಾಮವೆಲ್, ವೈ.ಎಲ್. ಜೈವಂತ್, ಎಂ.ಎಚ್. ಡೇವಿಡ್, ಇಮಾನವೆಲ್, ಸಂಪತಕುಮಾರ, ಸಾಲೋಮನ್, ಸುಭದ್ರಾ ಡಿ., ಪಿಂಟು, ದೀಪಕ, ಸ್ವರಾಜಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net