

ಬಸವಕಲ್ಯಾಣ: ರಾಜ್ಯ ರೈತ ಸಂಘದ ವಾರ್ಷಿಕೋತ್ಸವ, ಹೋರಾಟಗಾರ ಲಿಂ.ಬಸವರಾಜ ತಂಬಾಕೆ ಜನ್ಮದಿನ ನಿಮಿತ್ತ ಹಿರನಾಗಾಂವ ಗ್ರಾಮದಲ್ಲಿ ಕೃಷಿ ಕಾಯಕ ವಿಚಾರ ಗೋಷ್ಠಿ ಜರುಗಿತು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡೆ ಮಾತನಾಡಿ, ಹಳ್ಳಿಗಳಲ್ಲಿ ಕೃಷಿಕರನ್ನು ಒಗ್ಗೂಡಿಸಿ ಅವರ ಹಕ್ಕಿಗಾಗಿ ಚಳವಳಿ ರೂಪಿಸಿ, ಸಮಸ್ಯೆಗಳಿಗೆ ಪರಿಹಾರ ಪಡೆಯಲು ಬಸವರಾಜ ತಂಬಾಕೆ ಪ್ರೇರಣೆ ನೀಡಿದ್ದರು. ಕೃಷಿ ಕ್ಷೇತ್ರಕ್ಕೆ ತಂಬಾಕೆ ಕೊಡುಗೆ ಅಪಾರ ಎಂದು ಸ್ಮರಿಸಿದರು.
ಸಂಘದ ತಾಲೂಕು ಅಧ್ಯಕ್ಷ ಸುಭಾಷ ರಗಟೆ ಮಾತನಾಡಿ, ಪ್ರಸ್ತುತ ಯುವ ಸಮೂಹ ಕೃಷಿಯಿಂದ ದೂರಸರಿಯುತ್ತಿದೆ. ಕೃಷಿ ಕುಟುಂಬದವರು ತಮ್ಮ ಮಕ್ಕಳಿಗೆ ಒಕ್ಕಲುತನ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ಕೋರಿದರು.
ಮುಖಂಡ ನಾಗಶೆಟ್ಟೆಪ್ಪ ಪಂಢರಗೇರಾ ಮಾತನಾಡಿದರು. ಗ್ರಾಮ ಘಟಕ ಅಧ್ಯಕ್ಷ ವಿಠ್ಠಲ್ ಸೋನಾರೆ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರೇವಣಸಿದ್ದಪ್ಪ ಯರಬಾಗ, ಜೈಪ್ರಕಾಶ, ಸದಾನಂದ, ಚಂದ್ರಕಾಂತ ಮಾಸ್ತರ್, ಮಾದಣ್ಣ ಮೂಲಗೆ, ಶಿವಣ್ಣ ಮೂಲಗೆ, ಶಿವರಾಜ ಬಿರಾದಾರ್, ಹಣಮಂತ, ಗುಂಡಪ್ಪ ಕುದಮೂಡ, ಫಿರೋಜ್ ನಾಯಕ್ ಇತರರಿದ್ದರು.