

ಬಸವಕಲ್ಯಾಣ: ನಗರದ ರಥ ಮೈದಾನದ ಸಭಾ ಭವನದಲ್ಲಿ ಡಿ.13ರಿಂದ ಮೂರು ದಿನ ಸಂಜೆ 6.30ಕ್ಕೆ ಸಾರ್ವಜನಿಕ ಕುರಾನ್ ಪ್ರವಚನ ಆಯೋಜಿಸಲಾಗಿದೆ.
ಐಡಿಯಲ್ ಶಿಕ್ಷಣ ಸಂಸ್ಥೆಯಲ್ಲಿ ಕರೆದಿದ್ದ ಪ್ರವಚನ ಸ್ವಾಗತ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಗವಿ ಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ದೇಶದ ಹಿತಚಿಂತನೆ, ಸುಭದ್ರ ಕುಟುಂಬ, ಸದೃಢ ಸಮಾಜ ಹಾಗೂ ಶಾಂತಿಯ ಮಾರ್ಗದ ತತ್ವಗಳ ಕುರಿತು ಮಂಗಳೂರಿನ ಖ್ಯಾತ ಪ್ರವಚನಕಾರ, ಚಿಂತಕ ಮಹ್ಮದ್ ಕುಂಞ ಪ್ರವಚನ ನೀಡಲಿದ್ದಾರೆ ಎಂದರು.
ಜಗತ್ತಿಗೆ ಸಮಾನತೆ ಸಂದೇಶ ಸಾರಿ ಸಮಸಮಾಜ ನಿರ್ಮಿಸಿದ, ಕಲ್ಯಾಣಕ್ರಾಂತಿ ನಡೆದ ಪುಣ್ಯಭೂಮಿ ಇದಾಗಿದೆ. ಶರಣರು, ಸೂಫಿ, ಸಂತರ ನಾಡಿದು. ಶಾಂತಿ, ಸೌಹಾರ್ದ ಸಂದೇಶವನ್ನು ಕುರಾನ್ ಸಾರುತ್ತದೆ. ಪ್ರವಚನಕ್ಕೆ ನಗರ ಸೇರಿ ವಿವಿಧೆಡೆಯ ಜನ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಮಹ್ಮದ್ ಅಸ್ಲಂ ಜನಾಬ್, ಮೀರ್ ಅಹ್ಮದ್ ಅಲಿ ಮುನ್ಶಿ, ತಹಸೀನ್ ಅಲಿ ಜಮಾದಾರ್, ಮೀನಾಹಾಜ್ ಭೋಸ್ಲೆ, ಬಾಲಾಜಿ ಚಂಡಕಾಪುರೆ, ಶಾಂತಲಿಂಗ ಮಠಪತಿ ಇತರರಿದ್ದರು.
ಸ್ವಾಗತ ಸಮಿತಿ: ಕುರಾನ್ ಪ್ರವಚನ ನಿಮಿತ್ತ ಸ್ವಾಗತ ಸಮಿತಿ ರಚಿಸಲಾಗಿದೆ. ಡಾ.ಎಸ್.ಜಿ. ಭುರಾಳೆ (ಗೌರವಾಧ್ಯಕ್ಷ), ಮುಜಾಹಿದ್ ಪಾಶಾ ಖುರೇಶಿ (ಅಧ್ಯಕ್ಷ), ಶಿವಾನಂದ ಮೇತ್ರೆ (ಕಾರ್ಯಾಧ್ಯಕ್ಷ), ಗುರುನಾಥ ಗಡ್ಡೆ (ಕಾರ್ಯದರ್ಶಿ), ಮೌಲಾನಾ ಅಬ್ದುಲ್ ಸಲಾಂ, ಶಿವಕುಮಾರ ಶೆಟಗಾರ, ಯಶೋಧಾ ರಾಠೋಡ್, ಸಂಜೀವರಡ್ಡಿ ಯರಬಾಗ, ಮಿರ್ಜಾ ಅನ್ವರ್ ಬೇಗ್, ಝಲಿಕರ್ ಅಹ್ಮದ್, ರುಕ್ಷಾನಾ ತಹಸೀನ್, ಅಲ್ತಾಫ್ ಅಹ್ಮದ್ (ಸದಸ್ಯರು) ಸಮಿತಿಗೆ ನೇಮಕಗೊಂಡಿದ್ದಾರೆ.