ಹನಿ ಬೀಸ್ ಶಾಲೆಯಲ್ಲಿ ವಸ್ತು ಪ್ರದರ್ಶನ

The Honey Bees School Exibition Photo
Published on

ಬೀದರ್: ಇಲ್ಲಿಯ ನೌಬಾದ್‍ನ ದಿ ಹನಿ ಬೀಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ವಸ್ತು ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ನರ್ಸರಿ, ಎಲ್‍ಕೆಜಿ, ಯುಕೆಜಿ ಮಕ್ಕಳು ತಾವೇ ತಯಾರಿಸಿದ ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು.
ಭೂಗೋಳ, ಭಾರತ ನಕಾಶೆ, ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು, ಹಳ್ಳಿ ಜೀವನ, ಅಂಚೆ ಕಚೇರಿ, ಬ್ಯಾಂಕ್, ಸೂರ್ಯ, ಚಂದ್ರ, ನಕ್ಷತ್ರ, ಸೌರ ಮಂಡಲ ಮೊದಲಾದ ಮಾದರಿಗಳು ಪ್ರದರ್ಶನದಲ್ಲಿದ್ದವು.
ವಿಜ್ಞಾನ, ಗಣಿತ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾದರಿಗಳ ಬಗ್ಗೆ ಮಕ್ಕಳೇ ಖುದ್ದು ವಿವರಣೆ ನೀಡಿದರು.
ಪ್ರದರ್ಶನಕ್ಕೆ ಚಾಲನೆ ನೀಡಿದ ಬಿ.ಆರ್.ಸಿ. ತಾನಾಜಿ ಭಂಗೂರೆ ಅವರು, ಮಕ್ಕಳ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿರಂತರ ಫೌಂಡೇಷನ್ ಟ್ರಸ್ಟಿ ಲಕ್ಷ್ಮಿ ಮುಗಳಿ, ಮುಖ್ಯಶಿಕ್ಷಕಿ ಆರ್.ಎಸ್. ಭೈರೆ, ಶಾಲೆಯ ವ್ಯವಸ್ಥಾಪಕಿ ಚೈತನ್ಯ ಪಾರಶೆಟ್ಟಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net