ವಿದ್ಯಾರ್ಥಿಗಳಿಗೆ ನಿಘಂಟು ಉಚಿತ ವಿತರಣೆ

Markal Dictionary Distribution photo-2
Published on

ಬೀದರ್: ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರೂ ಆದ ಗಾಂಧಿ ಗಂಜ್ ಸಹಕಾರ ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಅಣ್ಣೆಪ್ಪ ಪಾಟೀಲ ಗಾದಗಿ ಅವರ ಜನ್ಮದಿನದ ಪ್ರಯುಕ್ತ ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಇಂಗ್ಲಿಷ್-ಕನ್ನಡ ನಿಘಂಟು ಉಚಿತವಾಗಿ ವಿತರಿಸಲಾಯಿತು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಜೀವನದಲ್ಲಿ ಉನ್ನತ ಸಾಧನೆಗೈಯಲು ಪ್ರಯತ್ನಿಸಬೇಕು ಎಂದು ವಿಜಯಕುಮಾರ ಪಾಟೀಲ ಗಾದಗಿ ಸಲಹೆ ಮಾಡಿದರು.
ವಿಜಯಕುಮಾರ ಪಾಟೀಲ ಗಾದಗಿ ಅವರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹತ್ತು ಹಲವು ಸಂಘ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದಾರೆ. ಸಮಾಜ ಪರ ಕಳಕಳಿ ಹೊಂದಿದ್ದಾರೆ. ಅವರ ಜನ್ಮದಿನವನ್ನು ವಿದ್ಯಾರ್ಥಿಗಳಿಗೆ ನಿಂಘಟು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಯುವ ಮುಖಂಡ ಧನರಾಜ ಬುಯ್ಯಾ ಹೇಳಿದರು.
ಪಿಡಿಒ ಉಮೇಶ ಜಾಬಾ, ಮುಖ್ಯಶಿಕ್ಷಕ ರೌಫ್ ಖಾನ್, ಗ್ರಾಮ ಪಂಚಾಯಿತಿ ಸದಸ್ಯರಾದ ಅನಿಲ್ ಪಾಟೀಲ, ಚಂದ್ರಶೇಖರ ಬುಯ್ಯಾ, ಶಿವು ಪೋತೆ, ಪ್ರಮುಖರಾದ ಮಲ್ಲಿಕಾರ್ಜುನ ಮಾಳಗೆ, ಪ್ರಕಾಶ ಕೋಳಿ, ಸತೀಶ್ ಪಾರಾ, ವೆಂಕಟ ಚಿದ್ರಿ, ಪ್ರಶಾಂತ ಬಿರಾದಾರ, ಬಲವಂತರಾವ್, ರಾಜಕುಮಾರ ಬುಯ್ಯಾ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net