ನೃತ್ಯ ವೈಭವ ಸೃಷ್ಟಿಸಿದ ‘ನೃತ್ಯಾಂಗನ'

Nrutyangan Nrutya Vaibhava-2
Published on

ಬೀದರ್: ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರವು ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ‘ನೃತ್ಯಾಂಗನ ನೃತ್ಯ ವೈಭವ'ವು ನೃತ್ಯ ಲೋಕದ ವೈಭವವನ್ನೇ ಸೃಷ್ಟಿಸಿತು.
ಕೇಂದ್ರದ ಅಧ್ಯಕ್ಷ ಪೂರ್ಣಚಂದ್ರ ಮೈನಾಳೆ ಅವರ ನಿರ್ದೇಶನದಲ್ಲಿ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶಿಸಿ ಸಭಿಕರ ಮನ ಗೆದ್ದರು.
ಭರತನಾಟ್ಯ, ಜಾನಪದ ನೃತ್ಯ, ನವದುರ್ಗೆ ನೃತ್ಯ, ವಚನ ನೃತ್ಯ, ಪುಣ್ಯಕೋಟಿ ನೃತ್ಯ, ಜನಪದ ಜಾತ್ರೆ, ಅಲರಿಪು, ಪುಷ್ಪಾಂಜಲಿ ನೃತ್ಯಗಳು ಪುಳಕಿತಗೊಳಿಸಿದವು.
ಉದ್ಘಾಟನೆ ನೆರವೇರಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರು, ಮನಸ್ಸಿಗೆ ಮುದ ನೀಡುವ ವಿವಿಧ ನೃತ್ಯ ಕಲೆಗಳನ್ನು ಉಳಿಸಿ, ಬೆಳೆಸಬೇಕಿದೆ ಎಂದು ಹೇಳಿದರು.
ನೃತ್ಯಾಂಗನ ಕೇಂದ್ರವು ವಿದ್ಯಾರ್ಥಿಗಳಿಗೆ ನಾಟ್ಯ ಕಲೆಗಳನ್ನು ಧಾರೆ ಎರೆಯುತ್ತಿದೆ. ಜಿಲ್ಲೆಯ ಜನರಿಗೆ ನೃತ್ಯದ ರಸದೌತಣ ಉಣ ಬಡಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೀತಿ ವೀರೇಂದ್ರ ಭೋರಾಳೆ ಮಾತನಾಡಿ, ನೃತ್ಯಾಂಗನ ಕೇಂದ್ರ ಆರಂಭವಾದದ್ದು 3 ಮಕ್ಕಳಿಂದ. ಈಗ ಕೇಂದ್ರದಲ್ಲಿ 60ಕ್ಕೂ ಹೆಚ್ಚು ಮಕ್ಕಳು ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. ಪೂರ್ಣಚಂದ್ರ ಅವರು ಮಕ್ಕಳ ಮನಸ್ಸು ಅರಳುವ ರೀತಿಯಲ್ಲಿ ನೃತ್ಯ ತರಬೇತಿ ಕೊಡುತ್ತಿದ್ದಾರೆ ಎಂದು ನುಡಿದರು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವರು, ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿದರು.
2023ನೇ ಸಾಲಿನ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸಂಗೀತ ತಾಳ ವಾದ್ಯ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಇಷ್ಶಿತಾ ಬೋರಾಳೆ, ಸುಷ್ಮಾ ಪಾವಡಶೆಟ್ಟಿ, ವೈಭವಿ ಶೀಲವಂತ ಹಾಗೂ ಮೃಡಾನಿ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಅನುಪಮಾ ಏರೋಳಕರ್, ಶಿವಕುಮಾರ ಬೆಲ್ದಾಳೆ, ಸರೋಜಾ ಅರಳಿ, ಲಕ್ಷ್ಮಿ ಮುಗಳಿ, ಮಡಿವಾಳಪ್ಪ ಖೇಣಿ, ಗೀತಾ ರಾಗಾ ಇದ್ದರು. ಮಹಾದೇವ ಪಟ್ನೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net