

ಬೀದರ್: ಪಾದಯಾತ್ರೆಯಲ್ಲಿ ತುಳಜಾಪುರಕ್ಕೆ ತೆರಳಿ ದೇವಿ ದರ್ಶನ ಪಡೆದು ಮರಳಿದ ಭಕ್ತರನ್ನು ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮದಲ್ಲಿ ಸತ್ಕರಿಸಲಾಯಿತು.
ಗ್ರಾಮಕ್ಕೆ ಬಂದ ಪಾದಯಾತ್ರಿಗಳನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಗ್ರಾಮದ ಜನ ಪ್ರತಿ ವರ್ಷ ಪಾದಯಾತ್ರೆಯಲ್ಲಿ ದೇವಿ ದರ್ಶನಕ್ಕೆ ತೆರಳುತ್ತಾರೆ. ಈ ಬಾರಿಯೂ ಅನೇಕರು ದೇವಿ ದರ್ಶನ ಪಡೆದು ಮರಳಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರಿಗಳನ್ನು ಸತ್ಕರಿಸಲಾಗಿದೆ ಎಂದು ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಯಾಕತಪುರ ಹೇಳಿದರು.
ಪ್ರಮುಖರಾದ ತಿಪ್ಪಣ್ಣ, ಸಿದ್ದಪ್ಪ, ರಾಜು, ಬೀರಪ್ಪ, ಶಂಕರ ಮೊದಲಾದವರು ಇದ್ದರು.