ಗಮನ ಸೆಳೆದ ಚೈತನ್ಯ ದೇವಿಯರ ದರ್ಶನ

Halbarga - Copy
Published on

ಬೀದರ್: ನವರಾತ್ರಿ ಪ್ರಯುಕ್ತ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಚೈತನ್ಯ ದೇವಿಯರ ದರ್ಶನ ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆಯಿತು.
ಬಾಲಕಿಯರು ಮೊದಲ ದಿನ ಐವರು, ಎರಡನೇ ದಿನ ಏಳು ಹಾಗೂ ಮೂರನೇ ದಿನ ಒಂಬತ್ತು ದೇವಿಯರ ವೇಷ ಧರಿಸಿ, ಪ್ರದರ್ಶನ ನೀಡಿದರು.
ಬೆಂಗಳೂರಿನ ರಾಜಯೋಗ ಶಿಕ್ಷಕ ಬಿ.ಕೆ. ಮಂಜುನಾಥ ಅವರು, ದೇವಿಯರ ಮಹಿಮೆ, ಸ್ವ ಚಿಂತನೆ, ಸ್ವ ದರ್ಶನ, ಆತ್ಮಶಕ್ತಿ ಜಾಗೃತಿ, ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡುವ ಬಗೆ, ಸಂಸ್ಕಾರದ ಅಗತ್ಯತೆ  ಕುರಿತು ಉಪನ್ಯಾಸ ನೀಡಿದರು.
ನಮ್ಮ ಅಂತರಂಗದಲ್ಲಿರುವ ದೈವಿ ಸಂಸ್ಕಾರ ಜಾಗೃತಗೊಳಿಸಿ, ಅಸುರಿ ಗುಣಗಳನ್ನು ಸಂಹರಿಸಿ, ಜೀವನದಲ್ಲಿ ಸುಖ, ಶಾಂತಿ, ಆನಂದದ ಅನುಭವ ಪಡೆಯುವುದು ಹೇಗೆ ಎನ್ನುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ರಾಜಯೋಗದ ವಿಧಾನಗಳನ್ನು ಹೇಳಿಕೊಡಲಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಲಬರ್ಗಾ ಶಾಖೆಯ ಮುಖ್ಯಸ್ಥೆ ಬಿ.ಕೆ. ವಾಣಿ ಬಹೆನ್‍ಜಿ ಹೇಳಿದರು.
ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಶಿಲ್ಪಾ ಬಹೆನ್‍ಜಿ, ಶರಣಯ್ಯ ಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯಕಾರಿಣಿ ಸದಸ್ಯ ನಾಗೇಶ ಪ್ರಭಾ, ಪ್ರಮುಖರಾದ ಘಾಳೆಪ್ಪ ನಾಗೂರೆ, ಮಹೇಶ ಪಾಟೀಲ, ಮಾರುತಿ ಸೂರ್ಯವಂಶಿ, ಶೋಭಾವತಿ ಶ್ರೀಮಾಳೆ, ರಮೇಶ ಪ್ರಭಾ, ಧನರಾಜ ಪಾಟೀಲ, ರಾಜಕುಮಾರ ಕುಂಬಾರ, ಮದನ್ ಪ್ರಭಾ, ವಿಶ್ವನಾಥ ಮೂಲಗೆ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net