

ಬೀದರ್: ವಿಜಯದಶಮಿ ಪ್ರಯುಕ್ತ ಭಾಲ್ಕಿ ತಾಲ್ಲೂಕಿನ ಖಾನಾಪುರದ ಮಲ್ಲಣ್ಣ ದೇವಸ್ಥಾನದಲ್ಲಿ ಅಕ್ಟೋಬರ್ 24 ರಂದು ಮಲ್ಲಣ್ಣ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ ರಥೋತ್ಸವ ನಡೆಯಲಿದೆ.
ಅಂದು ರಾತ್ರಿ 11.15ಕ್ಕೆ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಹೊರಟು, ಘೃತಮಾರಿ ತುಪ್ಪದ ಮಾಳವ್ವ (ಗುರುತ್ ಮಲ್ಲಮ್ಮ) ದೇವಸ್ಥಾನ, ಮುಖ್ಯ ಬೀದಿ, ಬೀದರ್- ಭಾಲ್ಕಿ ಮುಖ್ಯರಸ್ತೆ ಮೂಲಕ ಹಾಯ್ದು ಹನುಮಾನ ದೇವಸ್ಥಾನಕ್ಕೆ ತಲುಪಲಿದೆ. ನಂತರ ಅಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿವೆ.
ಅ. 25 ರಂದು ಬೆಳಿಗ್ಗೆ 6.30ಕ್ಕೆ ಮಹಾ ಮಂಗಳಾರತಿಯೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ.
ಪಲ್ಲಕ್ಕಿ ಹಾಗೂ ರಥೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮೈಲಾರ ಮಲ್ಲಣ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಮೇತ್ರೆ ವಡಗಾಂವ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ.