

ಬೀದರ್: ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಯುವ ಮುಖಂಡ ಪ್ರಶಾಂತ ಗುತ್ತೆದಾರ್ ಅವರನ್ನು ನೇಮಿಸಲಾಗಿದೆ. ಪಕ್ಷದ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ನಾಸೇರ್ ಖಾನ್ ಈ ನೇಮಕ ಮಾಡಿದ್ದಾರೆ. ಪ್ರಶಾಂತ ಗುತ್ತೆದಾರ್ ಒಂದೂವರೆ ದಶಕದಿಂದ ಪಕ್ಷದಲ್ಲಿದ್ದಾರೆ.
ನೇಮಕಾತಿ ಪತ್ರ ವಿತರಣೆ: ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂಖಾನ್ ಅವರು ನಗರದಲ್ಲಿ ಪ್ರಶಾಂತ ಗುತ್ತೆದಾರ್ ಅವರಿಗೆ ನೇಮಕಾತಿ ಪತ್ರ ವಿತರಿಸಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನಾಸೇರ್ ಖಾನ್ ಮೊದಲಾದವರು ಇದ್ದರು.