

ಬೀದರ್: ಸಕಾಲಕ್ಕೆ ಸಂಸ್ಕಾರ ಸಿಕ್ಕರೆ ಮಾನವ ಮಹಾದೇವನಾಗುತ್ತಾನೆ ಎಂದು ಬೇಮಳಖೇಡ್ದ ಶ್ರೀ ರಾಜಶೇಖರ ಶಿವಾಚಾರ್ಯ ಹೇಳಿದರು.
ನವರಾತ್ರಿ ನಿಮಿತ್ತ ತಾಲೂಕಿನ ಔರಾದ್ (ಎಸ್)ನ ಭವಾನಿ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ದುರ್ಗಾ ಶಕ್ತಿ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮಕ್ಕಳಿಗೆ ಪಾಲಕರು ಸಂಸ್ಕಾರ ನೀಡಬೇಕು. ಗುರು-ಹಿರಿಯರಿಂದಲೂ ಸನ್ಮಾರ್ಗ ಸಿಕ್ಕರೆ ಒಳ್ಳೆಯ ಮನುಷ್ಯರಾಗಿ ಬಾಳುತ್ತಾರೆ ಎಂದು ಹೇಳಿದರು.
ಬಿಜೆಪಿ ಬೀದರ್ ದಕ್ಷಿಣ ಮಂಡಲ ಅಧ್ಯಕ್ಷ ರಾಜರಡ್ಡಿ ಶಾಬಾದ್ ಉದ್ಘಾಟಿಸಿದರು. ರಾಮರಡ್ಡಿ ಚಿನ್ನಾರಡ್ಡಿ, ವಿಶ್ವೇಶ್ವರಯ್ಯ, ದಶರಥ ಬಡಿಗೇರ್, ನಾಗರಡ್ಡಿ, ಸಂಗ್ರಾಮ ಹೊಕ್ರಾಣಾ, ಚಂದ್ರಕಾಂತ ಶೆಟಕಾರ, ಈಶ್ವರಮ್ಮ ಬಿರಾದಾರ್, ಶಂಕರರಡ್ಡಿ ಬೆಳ್ಳೂರ, ಪಾರಮ್ಮ ಚಿಟಗುಪ್ಪ ಇತರರಿದ್ದರು. ಮಡೆಪ್ಪ ರಾಂಪುರೆ ಸ್ವಾಗತಿಸಿ, ನಿರೂಪಣೆ ಮಾಡಿದರು.