

ಬೀದರ್: ನವರಾತ್ರಿ ನಿಮಿತ್ತ ಅ.17ರಿಂದ 23ರವರೆಗೆ ಸಾರೆಗಮಪ ಸಂಸ್ಥೆ ವತಿಯಿಂದ ಜಿಲ್ಲೆಯ ವಿವಿಧೆಡೆ ದಸರಾ ದರ್ಬಾರ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಮಹೇಶಕುಮಾರ ಕುಂಬಾರ ತಿಳಿಸಿದರು.
ದೇವಿ ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಒಂದು ವಾರ ಕಾರ್ಯಕ್ರಮ ನಡೆಯಲಿದೆ. 17ರಂದು ಸಂಜೆ 6ಕ್ಕೆ ಭಾಲ್ಕಿ ಅಂಚೆ ಕಚೇರಿ ಹಿಂಭಾಗದ ಭವಾನಿ ನಗರದಲ್ಲಿ ದಸರಾ ದರ್ಬಾರ್ ಉದ್ಘಾಟನೆ ಸಮಾರಂಭ ನಡೆಯಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
18ರಂದು ಸಂಜೆ 6ಕ್ಕೆ ಔರಾದ್ ತಾಲೂಕಿನ ಕೌಠಾ(ಕೆ)ದ ಶ್ರೀ ವೈಷ್ಣೋದೇವಿ ಮಹಾಶಕ್ತಿ ಪೀಠ, 19ರಂದು ನೌಬಾದ್ ನ ಕೆಎಸ್ಆರ್.ಪಿ ವಸತಿನಿಲಯ ಪಕ್ಕದ ಜೈ ಭವಾನಿ ಮಾತಾ ಮಂದಿರ, 20ರಂದು ಬಸವಕಲ್ಯಾಣದ ತ್ರಿಪುರಾಂತ ಓಣಿಯ ಜೈಭವಾನಿ ಮಾತಾ ಮಂದಿರ, 21ರಂದು ಬೀದರ್ ಗುಂಪಾ ಬಳಿಯ ಶಿವಾಜಿ ನಗರ ಹನುಮಾನ ಮಂದಿರ, 22ರಂದು ಮಂಗಲಪೇಟ್ನ ಜೈ ಭವಾನಿ ಮಾತಾ ಮಂದಿರ ಹಾಗೂ ಅ.23ರಂದು ಸಾಯಿ ಸ್ಕೂಲ್ ಮೈದಾನದ ಶ್ರೀ ರಾಮಲೀಲಾ ಉತ್ಸವದಲ್ಲಿ ಕಾರ್ಯಕ್ರಮ ಜರುಗಲಿದೆ. ಎಲ್ಲ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಇದೆ ಎಂದರು. ಪತಂಜಲಿ ಯೋಗ ಸಮಿತಿ ಜಿಲ್ಲಾ ಯುವ ಅಧ್ಯಕ್ಷ ಗೋರಖನಾಥ ಕುಂಬಾರ, ಕಲಾವಿದರಾದ ಧೋಂಡಿರಾಮ ಧುರ್ವೆಶ್, ಬಲರಾಮ ಪಾಂಚಾಳ, ಜೆಸ್ಸಿ ಸೋನವಾನೆ, ಪ್ರಿಯಾ ಗುರುದೇವ, ಸ್ನೇಹಾ, ಅಕ್ಷಯ, ಅಭಿ, ಸಾಯಿ, ಕೃಷ್ಣ, ಫರ್ದಿನ್, ಸುರೇಶ, ಸುದರ್ಶನ, ದೀನು, ಜಾನ್, ರಚಿತಾ, ವಿಶಾಲ, ಅಜೀತ್ ಇದ್ದರು.