ತೆರಿಗೆ ಕಟ್ಟದ ಮಾಲೀಕರಿಗೆ ನೋಟಿಸ್

Shivraj Rathod
Published on

ಬೀದರ್: ರೂ.ಎರಡು ಲಕ್ಷಕ್ಕಿಂತ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ 300 ವಾಣಿಜ್ಯ ಮಳಿಗೆ ಮಾಲೀಕರಿಗೆ ನಗರಸಭೆ ನೋಟಿಸ್ ನೀಡಿದೆ.

ವಿವಿಧ ವಾಣಿಜ್ಯ ಕಟ್ಟಡಗಳಿಗೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್, ಅಧಿಕ ತೆರಿಗೆ ಉಳಿಸಿಕೊಂಡ 10 ಅಂಗಡಿಗಳಿಗೆ ಬೀಗ ಹಾಕಿದ್ದಾರೆ. ಅಧಿಕ ತೆರಿಗೆ ಉಳಿಸಿಕೊಂಡ ಮಾಲೀಕರಿಗೆ ಎರಡು ಬಾರಿ ನೋಟಿಸ್ ನೀಡಿದರೂ ತೆರಿಗೆ ಪಾವತಿಸದ್ದರಿಂದ ಬೀಗ ಹಾಕಲಾಗಿದೆ. ನೋಟಿಸ್ ನೀಡಿದ ಎಲ್ಲ ಮಾಲೀಕರು ಕಾಲಮಿತಿಯಲ್ಲಿ ತೆರಿಗೆ ಪಾವತಿಸಬೇಕು. ನಿರ್ಲಕ್ಷ್ಯ ಮಾಡಿದರೆ ಕಟ್ಟಡಗಳಿಗೆ ಬೀಗ ಹಾಕುವುದಾಗಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net