

ಭಾಲ್ಕಿ: ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬೀದರ್ ನಲ್ಲಿ ಈಚೆಗೆ ನಡೆದ ಪ್ರಸಕ್ತ ಸಾಲಿನ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ವೈಯಕ್ತಿಕ ಮತ್ತು ಗುಂಪು ಕ್ರೀಡೆಗಳಾದ ರನ್ನಿಂಗ್, ಗುಂಡು ಎಸೆತ, ಚೆಸ್, ಕರಾಟೆ, ಕುಸ್ತಿ, ಬಾಕ್ಸಿಂಗ್ ಸೇರಿ ವಿವಿಧ ಕ್ರೀಡೆಗಳಲ್ಲಿ ಬಾಲಕ ಮತ್ತು ಬಾಲಕಿಯರು ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕರ ವಿಭಾಗ: 200ಮೀ ಓಟ: ಮಹೇಶ್ ಪ್ರಥಮ. ಗುಂಡು ಎಸೆತ: ಮಲ್ಲಿಕಾರ್ಜುನ ಪ್ರಥಮ. ಚಕ್ರ ಎಸೆತ: ಮಲ್ಲಿಕಾರ್ಜುನ ಪ್ರಥಮ. ಕುಸ್ತಿ: ಕಿಶನ್ ಪ್ರಥಮ. ಕರಾಟೆ: ಚನ್ನಬಸವ ಪ್ರಥಮ. ಚೆಸ್: ಸುಮಿತ್ ಮತ್ತು ವಿನಾಯಕ್ ಪ್ರಥಮ. 4/100 ಮೀ. ರಿಲೆ: ಸಸಿಜಾಕ್ಷ, ಸಂತೋಷ, ಶ್ರೀಹಾನ್ ಮತ್ತು ಮಹೇಶ್ ಪ್ರಥಮ. ಎತ್ತರ ಜಿಗಿತ: ಸಸಿಜಾಕ್ಷ ಪ್ರಥಮ ಸ್ಥಾನ. ತ್ರಿವಿಧ ಜಿಗಿತ: ಮಹೇಶ ರೇವಣಪ್ಪ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗ: 200ಮೀ ಓಟ: ವೈಷ್ಣವಿ ದ್ವಿತೀಯ. 1500ಮೀ ಓಟ: ಪ್ರಾರ್ಥನಾ ಪ್ರಥಮ. ಯೋಗ: ಮಯೂರಿ, ತೃಪ್ತಿ, ಮತ್ತು ಅರ್ಚನಾ ಪ್ರಥಮ. ಚೆಸ್ ಸ್ಪರ್ಧೆ: ಶ್ರಾವ್ಯ, ಅಂಜಲಿ ಮತ್ತು ದೀಕ್ಷಾ ಪ್ರಥಮ. ಕುಸ್ತಿ: ಅರ್ಚನಾ ಮತ್ತು ವಿಜಯಲಕ್ಷ್ಮೀ ಪ್ರಥಮ. ಬಾಕ್ಸಿಂಗ್ ಸ್ಪರ್ಧೆ: ಅರ್ಚನಾ ಪ್ರಥಮ. ಶಟಲ್ ಬ್ಯಾಡ್ಮಿಂಟನ್: ಸೃಷ್ಟಿ ಮತ್ತು ತಂಡ ಪ್ರಥಮ. ಬಾಲ್ ಬ್ಯಾಡ್ಮಿಂಟನ್: ಸಿಂಚನ ಮತ್ತು ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ.
ಹರ್ಷ: ಕ್ರೀಡಾಕೂಟದಲ್ಲಿನ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಶ್ರೀ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಹರ್ಷ ವ್ಯಕ್ತಪಡಿಸಿದ್ದು, ನವಂಬರ್ ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರುವಂತೆ ಶುಭ ಹಾರೈಸಿದ್ದಾರೆ.