

ಭಾಲ್ಕಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮು ಬಿತ್ತನೆ ಆರಂಭಗೊಂಡಿದ್ದು, ಕೃಷಿ ಇಲಾಖೆ ಸಬ್ಸಿಡಿ ದರದಲ್ಲಿ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಒತ್ತಾಯಿಸಿದ್ದಾರೆ.
ಯಾವೊಬ್ಬ ರೈತನಿಗೂ ಬೀಜದ ಕೊರತೆ ಆಗಬಾರದು. ಕಡಲೆ, ಜೋಳ, ಕುಸುಬೆ ಬೀಜ ಸಮರ್ಪಕ ಪೂರೈಸಬೇಕು. ಕಳೆದ ಬಾರಿ ಹಲವೆಡೆ ಕಳಪೆ ಬೀಜ ವಿತರಿಸಿದ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಹಾಗಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ದಾಸ್ತಾನು ಇಟ್ಟುಕೊಂಡು ರೈತರಿಗೆ ಅಗತ್ಯವಿರುವ ಬೀಜ ಕೊಡಬೇಕು ಎಂದು ಕೋರಿದ್ದಾರೆ.