ಸಾಹಿತ್ಯ ಕ್ಷೇತ್ರದಲ್ಲಿ ಯುವಕರು ಹೆಚ್ಚು ತೊಡಗಲಿ

8blk1
Published on

ಭಾಲ್ಕಿ: ಬೀರಿ(ಬಿ) ಗ್ರಾಮದ ಯುವ ಸಾಹಿತಿ, ಪದವಿ ವ್ಯಾಸಂಗ ಮಾಡುತ್ತಿರುವ ಸಚಿನ್ ಕಾರಬಾರಿ ಅವರು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು.
ಮೈಸೂರಿನಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಸಮ್ಮುಖದಲ್ಲಿ ಸಚಿನ್ ತಾನು ಬರೆದ ಚೊಚ್ಚಲ ಕವನ ಸಂಕಲನ ಅಂತರಂಗದ ರಂಗ ಪುಸ್ತಕ ಬಿಡುಗಡೆಗೆ ಮುನ್ನ ಪೂಜ್ಯರಿಗೆ ಸಮರ್ಪಿಸಿ ಆಶೀರ್ವಾದ ಪಡೆದರು.
ಪಟ್ಟದ್ದೇವರು ಮಾತನಾಡಿ, ಯುವ ಸಾಹಿತಿ ಸಚಿನ್ ವ್ಯಾಸಂಗದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವುದು ಸಂತಸದ ಸಂಗತಿ. ಉತ್ತಮ ನಾಗರಿಕರಾಗಲು ಸಾಹಿತ್ಯ ಪ್ರೇರಣೆ ನೀಡುತ್ತದೆ. ಹೀಗಾಗಿ ಯುವಕರು ಈ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಚಿನ್ ಕಾರಬಾರಿ ಎಲ್ಕೆಜಿಯಿಂದ ಪಿಯುಸಿವರೆಗೆ ಕರಡ್ಯಾಳ ಗುರುಕುಲದಲ್ಲಿ ಶಿಕ್ಷಣ ಪಡೆದು ಮೈಸೂರಿನಲ್ಲಿ ಪದವಿ ಓದುವುದರ ಜತೆಗೆ ಅಂತರಂಗದ ರಂಗ ಮೊದಲ ಕವನ ಸಂಕಲನ ರಚಿಸಿ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಭದ್ರೇಶ ಕಾರಾಮುಂಗೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net