ಗುರಿ ಸಾಧನೆಗಿರಲಿ ದೃಢ ನಿರ್ಧಾರ

Ghodampalli
Published on

ಬೀದರ್: ಜೀವನದ ಗುರಿ ಮುಟ್ಟಲು ಹಲವು ದಾರಿಗಳಿವೆ. ಏನೇ ಅಡೆತಡೆ ಬಂದರೂ ಯಶಸ್ಸಿನ ದಡ ಸೇರುತ್ತೇನೆ ಎಂಬ ದೃಢ ನಿರ್ಧಾರ ಇಂದಿನ ಮಕ್ಕಳಲ್ಲಿ ಬೇಕಾಗಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಾಲೂಕಿನ ಘೋಡಂಪಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ 2023-24ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇನ್ನೊಬ್ಬರನ್ನು ಅನುಕರಣೆ ಮಾಡುವ ಬದಲು ನಮ್ಮದೇ ಆದ ಭಿನ್ನ ವ್ಯಕ್ತಿತ್ವದಿಂದ ಬೆಳೆಯಬೇಕು. ನಮ್ಮ ಮೇಲೆ ನಮಗೆ ವಿಶ್ವಾಸ ಇರಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಫುಲಮ್ಮ ಸುಮಂತ, ಉಪಾಧ್ಯಕ್ಷ ನರಸಪ್ಪ ಜಾನಕನೋರ್, ಪರಿಶಿಷ್ಟ ಪಂಗಡ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ್, ಪ್ರಾಂಶುಪಾಲ ಪ್ರೊ.ದೇವಿದಾಸ ತುಮಕುಂಟೆ, ವೇದಪ್ರಕಾಶ್ ಆರ್ಯ, ಸಚ್ಚಿದಾನಂದ ರುಮ್ಮಾ, ಅಂಜಲಿ, ಸಂತೋಷಕುಮಾರ, ಭಾಗ್ಯವಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net