ಹನುಮಾನ ಚಾಲೀಸಾದಿಂದ ದುಃಖ ನಿವಾರಣೆ

Hanuman Chalisa Mahayagna
????????????????????????????????????
Published on

ಬೀದರ್: ಹನುಮಾನ ಚಾಲೀಸಾ ಪಠಣದಿಂದ ಸಕಲ ದುಃಖಗಳು ನಿವಾರಣೆ ಆಗುತ್ತವೆ ಎಂದು ಹೈದರಾಬಾದ್-ಹಲಬರ್ಗಾ-ಶಿವಣಿ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಹೇಳಿದರು.
ಏಕಲ್ ಅಭಿಯಾನ ಜಿಲ್ಲಾ ಘಟಕದ ವತಿಯಿಂದ ನಗರದ ಸ್ವಾಮಿ ಸಮರ್ಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋಟಿ ಹನುಮಾನ ಚಾಲೀಸಾ ಪಾರಾಯಣ ಮಹಾ ಯಜ್ಞಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾ ಬಲಶಾಲಿ, ಜ್ಞಾನಿ ಆಗಿರುವ ಆಂಜನೇಯನಿಗೆ ಅನಿಷ್ಠಗಳನ್ನು ದೂರ ಮಾಡುವ ಶಕ್ತಿ ಇದೆ. ಕಾರಣ, ಪ್ರತಿಯೊಬ್ಬರೂ ನಿತ್ಯ ಹನುಮಾನ ಚಾಲೀಸಾ ಪಠಿಸಬೇಕು ಎಂದು ತಿಳಿಸಿದರು.
ಸಮಾಜದಲ್ಲಿನ ಅನೇಕ ಸಮಸ್ಯೆಗಳಿಗೆ ಭಾರತೀಯ ಸಂಸ್ಕøತಿಯನ್ನು ಮರೆತಿರುವುದೇ ಕಾರಣವಾಗಿದೆ ಎಂದು ನುಡಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ಭಾರತ ತನ್ನ ಶ್ರೇಷ್ಠ ಸಂಸ್ಕøತಿಯಿಂದಾಗಿಯೇ ಹಿಂದೆ ವಿಶ್ವಗುರು ಆಗಿತ್ತು. ಅದು ಮತ್ತೆ ಮರುಕಳಿಸಬೇಕಿದೆ ಎಂದು ಹೇಳಿದರು.
ಸನಾತನ ಹಿಂದು ಧರ್ಮದ ಮೌಲ್ಯಗಳನ್ನು ಎಲ್ಲರೂ ಅರಿಯಬೇಕು. ಧರ್ಮ ರಕ್ಷಣೆಗೆ ಮುಂದಾಗಬೇಕು. ಪ್ರತಿ ಗ್ರಾಮಗಳಲ್ಲೂ ಹನುಮಾನ ಸೇನೆ ರಚನೆಯಾಗಬೇಕು ಎಂದು ತಿಳಿಸಿದರು.
ಬೆಳ್ಳೂರಿನ ಮಾತೆ ಅಮೃತಾನಂದಮಯಿ ಮಾತನಾಡಿ, ಹನುಮಾನ ಚಾಲೀಸಾ ಪಠಣ ಮಾಡುವುದರಿಂದ ತನು, ಮನ ಶುದ್ಧಿ ಆಗುತ್ತದೆ. ಹೊಸ ಚೈತನ್ಯ ದೊರಕುತ್ತದೆ ಎಂದು ಹೇಳಿದರು.
ಗಡಿಗೌಡಗಾಂವ್‍ನ ಶಾಂತಲಿಂಗ ಶಿವಾಚಾರ್ಯ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ ಹನುಮನ ವಾಸವಿದೆ. ಆತ ಗ್ರಾಮವನ್ನು ರಕ್ಷಿಸುವವನಾಗಿದ್ದಾನೆ ಎಂದು ತಿಳಿಸಿದರು.
ರಾಜೇಶ್ವರದ ರುದ್ರಮುನಿ ಶಿವಾಚಾರ್ಯ, ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯ ರಾಮಕೃಷ್ಣ ಸಾಳೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಸಂಚಾಲಕ ಶಿವರಾಜ ಹಲಶೆಟ್ಟಿ ಮಾತನಾಡಿದರು.
ಏಕಲ್ ಅಭಿಯಾನದ ಪ್ರಮುಖರು, ಜಿಲ್ಲೆಯ 180 ಗ್ರಾಮಗಳ ಶಿಕ್ಷಕರು ಹಾಗೂ ಸಾರ್ವಜನಿಕರು ಸೇರಿದಂತೆ 350 ಜನರಿಗೆ ಸಾಮೂಹಿಕ ಹನುಮಾನ ಚಾಲೀಸಾ ಸಂಕಲ್ಪ ಮಾಡಿಸಲಾಯಿತು. ಏಕಲ್ ಅಭಿಯಾನದ ಜಿಲ್ಲೆಯ ಉತ್ತಮ ಶಿಕ್ಷಕರನ್ನು ಸನ್ಮಾನಿಸಿ, ಪ್ರೋತ್ಸಾಹ ಧನ ವಿತರಿಸಲಾಯಿತು.
ಏಕಲ್ ಅಭಿಯಾನದ ದಕ್ಷಿಣ ಭಾರತ ಕ್ಷೇತ್ರೀಯ ಪ್ರಭಾರಿ ಅನಿಲಕುಮಾರ, ಭಾಗ ಸಮಿತಿ ಅಧ್ಯಕ್ಷ ರಾಜಕುಮಾರ ಅಗ್ರವಾಲ್, ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಅಳ್ಳೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ನೌಬಾದೆ, ಹಿಂದೂ ಜನಜಾಗೃತಿ ಸಮಿತಿ ಪ್ರಮುಖ ಗುರುಪ್ರಸಾದ ಗೌಡ, ಪ್ರಮುಖರಾದ ಸತ್ಯಪ್ರಕಾಶ್, ರೇವಣಸಿದ್ದಪ್ಪ ಜಲಾದೆ, ಸಚ್ಚಿದಾನಂದ ಚಿದ್ರೆ, ಜಾಧವ್ ಪಟೇಲ್, ದತ್ತಾತ್ರೇಯ ಸಗ್ಗಂ, ಕಲ್ಪನಾ ದೇಶಪಾಂಡೆ, ಎನ್.ಆರ್. ವರ್ಮಾ, ವೀರಶೆಟ್ಟಿ ಮಣಗೆ, ಸೂರ್ಯಕಾಂತ ಶೆಟಕಾರ್, ವೀರೇಂದ್ರ ಶಾಸ್ತ್ರಿ, ಶಿವಲೀಲಾ ಚಿದ್ರೆ, ಅರುಣಾ ಅಳ್ಳೆ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net