ಪೊಲೀಸರ ಸಮ್ಮುಖ ಪತ್ನಿಗೆ ತಾಳಿ ಕಟ್ಟಿದ ಪತಿ

kavayyashree
Published on

ಬೀದರ್: ಸುಲಿಗೆಯಾಗಿದ್ದ ಮಾಂಗಲ್ಯ ಮರಳಿ ಸಿಕ್ಕಿದ್ದರಿಂದ ಪೊಲೀಸರ ಸಮ್ಮುಖ ಪತ್ನಿಗೆ ಪತಿ ತಾಳಿ ಕಟ್ಟಿದ ಪ್ರಸಂಗ ನಡೆದಿದೆ.

ಮೇ 14ರಂದು ಹುಮನಾಬಾದ್ನ ಅಂಬೇಡ್ಕರ್ ವೃತ್ತದಿಂದ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಕಾವ್ಯಶ್ರೀ ಗಿರಿರಾಜ ಕಠ್ಠಳ್ಳಿ ಕೊರಳಲ್ಲಿನ 7 ಗ್ರಾಂ ಲಾಕೆಟ್, 15 ಗ್ರಾಂ ಮಿನಿ ಗಂಟನ್, 11 ಗ್ರಾಂ ತಾಳಿ ಸೇರಿ 1.65 ಲಕ್ಷದ 3 ತೊಲ, 3 ಗ್ರಾಂ ಚಿನ್ನಾಭರಣಗಳನ್ನು ಕಳ್ಳ ಕಿತ್ತುಕೊಂಡು ಪರಾರಿಯಾಗಿದ್ದ. ಪೊಲೀಸರ ವಿಶೇಷ ತಂಡ ಆರೋಪಿಯನ್ನು ಬಂಧಿಸಿ ತಾಳಿ ಇತರ ವಸ್ತುಗಳನ್ನು ಜಪ್ತಿ ಮಾಡಿದೆ. ಕಾವ್ಯಶ್ರೀ ಅವರಿಗೆ ನೀಡಿದಾಗ ಎಸ್ಪಿ ಕಚೇರಿಯಲ್ಲಿ ಅವರ ಪತಿ ಗಿರಿರಾಜ ಕಠ್ಠಳ್ಳಿ ತಾಳಿ ಕಟ್ಟಿ ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net