ಅಂಚೆ ಸಿಬ್ಬಂದಿಯಿಂದ ಮಣ್ಣು ಕಳಸ ಹಸ್ತಾಂತರ

Post office - Copy
Published on

ಬೀದರ್: ನವದೆಹಲಿಯ ಅಮೃತ್ ವಾಟಿಕಾ ಉದ್ಯಾನಕ್ಕೆ ಜಿಲ್ಲೆಯಲ್ಲಿ ಸಂಗ್ರಹಿಸಿದ ಮಣ್ಣು ತುಂಬಿದ ಕಳಸಗಳನ್ನು ಅಂಚೆ ಇಲಾಖೆ ಸಿಬ್ಬಂದಿ ನಗರದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಅವರಿಗೆ ಹಸ್ತಾಂತರಿಸಿದರು.
ಅಂಚೆ ಇಲಾಖೆ ಸಿಬ್ಬಂದಿ ಪ್ರತಿ ಹಳ್ಳಿಗೆ ಭೇಟಿ ಕೊಡುತ್ತಾರೆ. ಇಲಾಖೆಯ ಸಂಪರ್ಕ ಜಾಲ ಬಳಸಿಕೊಂಡು ಜಿಲ್ಲೆಯ ನಗರ, ಪಟ್ಟಣ ಹಾಗೂ ಎಲ್ಲ ಗ್ರಾಮಗಳಿಂದ ಅಮೃತ್ ವಾಟಿಕಾ ಉದ್ಯಾನಕ್ಕೆ ಮಣ್ಣು ಸಂಗ್ರಹಿಸಲಾಗಿದೆ ಎಂದು ಬೀದರ್ ಅಂಚೆ ಅಧೀಕ್ಷಕ ಶ್ರೀಕರ್ ಬಾಬು ಹೇಳಿದರು.
ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಆಡಳಿತಕ್ಕೆ ಮಣ್ಣು ಕಳಸ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ತಿಳಿಸಿದರು.
ಅಮೃತ್ ವಾಟಿಕಾಗೆ ಮಣ್ಣು ಸಂಗ್ರಹಿಸಿ ಕಳಿಸುವ ಅವಕಾಶ ದೊರೆತದ್ದು ನಮ್ಮೆಲ್ಲರ ಸುದೈವ ಎಂದು ಪ್ರಧಾನ ಅಂಚೆ ಪಾಲಕಿ ಮಂಗಲಾ ಭಾಗವತ್ ಹೇಳಿದರು.
ಈಗಾಗಲೇ 500ಕ್ಕೂ ಹೆಚ್ಚು ಕಡೆಗಳಲ್ಲಿ ಮಣ್ಣು ಸಂಗ್ರಹಿಸಿದ ಛಾಯಾಚಿತ್ರಗಳು ಪಿಎಂ ಪೋರ್ಟ್‍ಲ್‍ನಲ್ಲಿ ಅಪ್‍ಲೋಡ್ ಆಗಿವೆ. ಇನ್ನಷ್ಟು ಛಾಯಾಚಿತ್ರಗಳನ್ನು ಅಪ್‍ಲೋಡ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಅಮೃತ್ ವಾಟಿಕಾಗೆ ಮಣ್ಣು ಸಂಗ್ರಹಿಸುವ ಅಭಿಯಾನ ಮೂರು ಹಂತಗಳಲ್ಲಿ ನಡೆದಿದೆ. ಕೊನೆಯ ಹಂತದಲ್ಲಿ ಜಿಲ್ಲಾಮಟ್ಟದಲ್ಲಿ ಸಂಗ್ರಹಿಸಲಾಗುವ ಎಲ್ಲ ಮಣ್ಣಿನ ಕಳಸಗಳನ್ನು ವಿಶೇಷ ರೈಲು ಮೂಲಕ ನವದೆಹಲಿಗೆ ಕಳಿಸಲಾಗುವುದು ಎಂದು ಮಯೂರಕುಮಾರ ಗೋರಮೆ ತಿಳಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಫುಲೇಕರ್, ಸಹಾಯಕ ಅಂಚೆ ಅಧೀಕ್ಷಕ ಶ್ರೀಧರ, ಅಂಚೆ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net