100 ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಪುಸ್ತಕ ವಿತರಣೆ

Halbarga Public School Photo-2
Published on

ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ 40ನೇ ಜನ್ಮದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಪುಸ್ತಕ ಹಾಗೂ ಪೆನ್ ವಿತರಿಸಲಾಯಿತು.
ಹಾವಗಿಲಿಂಗೇಶ್ವರ ಶಿವಾಚಾರ್ಯರು 100 ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ ಹಾಗೂ ಪೆನ್ ವಿತರಿಸಿದರು.
ಮಠದ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ ವಿತರಿಸಿ ಶ್ರೀಗಳ ಜನ್ಮದಿನ ಅರ್ಥಪೂರ್ಣವಾಗಿ ಆಚರಿಸಿರುವುದು ಶ್ಲಾಘನೀಯ ಎಂದು ಮುಖ್ಯಶಿಕ್ಷಕ ನರಸಿಂಗ್ ಮೋಳಕೇರಿ ಹೇಳಿದರು.
ಹಲಬರ್ಗಾ ಮಠದ ಅಭಿವೃದ್ಧಿ ಸೇರಿದಂತೆ ಹಾವಗಿಲಿಂಗೇಶ್ವರ ಶಿವಾಚಾರ್ಯರು ಜಿಲ್ಲೆಯಲ್ಲಿ ಕೈಗೊಂಡ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಈ ಸಂದರ್ಭದಲ್ಲಿ ಮಾತನಾಡಿದ ಅನೇಕರು ಸ್ಮರಿಸಿದರು.
ಪ್ರಮುಖರಾದ ನಾಗನಾಥ ಪನ್ನಾಳೆ, ರಮೇಶ ಪಾಟೀಲ ಕರಡ್ಯಾಳ, ನೂರಂದಪ್ಪ ಪ್ರಭಾ, ರಾಜಕುಮಾರ ಚಲುವಾ, ಶಾಂತಕುಮಾರ ಮಾರಗೆ, ರಾಜಕುಮಾರ ಕುಂಬಾರ, ಅಮರ ಪ್ರಭಾ, ರಾಜಕುಮಾರ ಗುಮ್ತಾ, ದಯಾನಂದ, ಸಿದ್ರಾಮೇಶ ಪ್ರಭಾ, ವಿಜಯಕುಮಾರ ಪಾಂಚಾಳ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net