ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

Nittur B Teacher Ganesh Jadhav Sanman Photo
Published on

ಬೀದರ್: ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಭಾಲ್ಕಿ ತಾಲ್ಲೂಕಿನ ನಿಟ್ಟೂರ(ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗಣೇಶ ಜಾಧವ್ ಅವರನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲಾಯಿತು.
ನಿಟ್ಟೂರ(ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಲೋಬಾಜಿ, ಎಸ್‍ಡಿಎಂಸಿ ಅಧ್ಯಕ್ಷ ಶಶಿಕಾಂತ ಮಾನಕಾರಿ, ಮುಖ್ಯಶಿಕ್ಷಕ ಪುಂಡಲೀಕರಾವ್ ಗುಣಜಿ, ಶಿಕ್ಷಕರಾದ ಅವಿನಾಶ ಜೋಳದಾಪಕೆ, ನಾಮದೇವರಾವ್ ಇಂಗಳೆ, ನಾಗೇಂದ್ರ, ರಮೇಶ, ಛಾಯಾ ಮಾನಕಾರಿ, ಅಂಬುಜಾ ಕುಲಕರ್ಣಿ, ನಿಶಾರಾಣಿ ಪಡವಳಕರ್, ಬಾಲಿಕಾ ಮೇತ್ರೆ, ದೇವೇಂದ್ರ ಕರಂಜೆ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net