

ಬೀದರ್: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಭಕ್ತರು ಹಾವಗಿಲಿಂಗೇಶ್ವರ ಶಿವಾಚಾರ್ಯರ 40ನೇ ಜನ್ಮದಿನವನ್ನು ಗುರುವಾರ ಸಂಭ್ರಮದಿಂದ ಆಚರಿಸಿದರು.
ಕೇಕ್ ಕತ್ತರಿಸಿ ಶ್ರೀಗಳಿಗೆ ತಿನ್ನಿಸಿದರು. ಶಾಲು ಹೊದಿಸಿ, ಹೂಮಾಲೆ ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.
ಹೈದರಾಬಾದ್-ಶಿವಣಿ-ಹಲಬರ್ಗಾ ಮಠದ ಪೀಠಾಧಿಪತಿ ಆಗಿರುವ ಹಾವಗಿಲಿಂಗೇಶ್ವರ ಶಿವಾಚಾರ್ಯರು ಜಿಲ್ಲೆಯಲ್ಲಿ ನಿರಂತರ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಪರಿವರ್ತನೆಗೂ ಶ್ರಮಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ನುಡಿದರು.
ಜಾತ್ರೆ, ಪ್ರವಚನ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಆಧ್ಯಾತ್ಮ ಜಾಗೃತಿ ಮೂಡಿಸುತ್ತಿದ್ದಾರೆ. ಸನ್ಮಾರ್ಗ ತೋರುತ್ತಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ರಮೇಶ ಪ್ರಭಾ, ಬಸವರಾಜ ಕಾರಬಾರಿ, ರಮೇಶ ಪಾಟೀಲ ಕರಡ್ಯಾಳ್, ರಾಜಕುಮಾರ ಚಲುವಾ, ರಾಜಕುಮಾರ ಕುಂಬಾರ, ಅಮರ ಪ್ರಭಾ, ಪ್ರದೀಪ್ ಬಿರಾದಾರ, ಶ್ರೀಕಾಂತ ಸ್ವಾಮಿ, ನೂರಂದಪ್ಪ ಪ್ರಭಾ, ವೀರಶೆಟ್ಟಿ ಪ್ರಭಾ, ಉಮಾಕಾಂತ ಗುಮ್ತಾ, ಶರಣಪ್ಪ ಪ್ರಭಾ, ರವಿ ಜಳಕೋಟೆ ಮತ್ತಿತರರು ಪಾಲ್ಗೊಂಡಿದ್ದರು.