

ಬೀದರ್: ಸಂಘ-ಸಂಸ್ಥೆಗಳು ಜನಪರ ಮತ್ತು ಸಮಾಜಮುಖಿ ಕೆಲಸಗಳ ಜತೆಗೆ ತಮ್ಮ ಹಳ್ಳಿ ಅಭಿವೃದ್ಧಿಗೂ ಶ್ರಮಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಆಣದೂರ ಗ್ರಾಮದ ಸರ್ವಜ್ಞ ಶಾಲೆಯಲ್ಲಿ ಗ್ರಾಮ ವಿಕಾಸ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ದಶಮಾನೋತ್ಸವ ಉದ್ಘಾಟಿಸಿ ಮಾತನಾಡಿ, ಮನುಷ್ಯ ಸಂಘಜೀವಿ. ಸಂಘಟನೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮ ವಿಕಾಸ ಟ್ರಸ್ಟ್ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಜತೆಗೆ ಸಾಮಾಜಿಕ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಂಸ್ಥೆ ಹತ್ತು ವರ್ಷದಿಂದ ನಿರಂತರ ಜನಪರ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಸರ್ಕಾರೇತರ ಸಂಸ್ಥೆಗಳು ಸಮಾಜ ಸೇವೆ ಉದ್ದೇಶವಿಟ್ಟುಕೊಂಡು ಕಾರ್ಯ ಮಾಡಬೇಕು. ಸಂಸ್ಥೆಗಳ ಸೇವೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಬಸವರಾಜ ಬಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ, ಸಾಮಾಜಿಕ, ಮಹಿಳಾ ಸಬಲೀಕರಣ ನಿಟ್ಟಿನಲ್ಲಿ ಹತ್ತು ವರ್ಷದಿಂದ ಟ್ರಸ್ಟ್ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸರಡ್ಡಿ ನರಸಾರಡ್ಡಿ, ಪ್ರಮುಖರಾದ ನಿತೀನ್ ಕಪರ್ೂರ, ಬಸವರಾಜ ಹಿಲಾಲಪುರೆ, ಭಗವಂತ ಬಶೆಟ್ಟಿ, ಸಂಜುರಡ್ಡಿ, ಅಶೋಕ ಚಿದ್ರಿ, ಚಂದ್ರಾರಡ್ಡಿ, ಪ್ರಭುಶೆಟ್ಟಿ ಪಸರ್ಗಿ, ರೇವಣಪ್ಪ ಚಿಲ್ಲರ್ಗಿ, ಅನೀಲ ದುರ್ಗಾ, ಮಹಿಪಾಲರಡ್ಡಿ ಭೀಮರಡ್ಡಿ, ಪರಮೇಶ ಬಶೆಟ್ಟಿ, ಸಂತೋಷ ಸೋರಳ್ಳಿ, ಬಸವರಾಜ ಪಾಟೋದಿ, ಸಂತೋಷರಡ್ಡಿ ತಿಪ್ಪಾರಡ್ಡಿ, ಮಹೇಶ ಮಡಿವಾಳ, ಚೇತನ್ ಸೋರಳ್ಳಿ ಇದ್ದರು.
ಪ್ರೀತಿ ನಾಗನ್ನೋರ್ ಸ್ವಾಗತಿಸಿದರು. ಲಕ್ಷ್ಮೀಕಾಂತ ನಿರೂಪಣೆ ಮಾಡಿದರು. ದಿವ್ಯರಾಣಿ ವಂದಿಸಿದರು. ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ ಪಾಟೀಲ್ ಮಹಾಗಾಂವ ಅವರ ಜೀವನ ಆಧಾರಿತ ಕ್ರಾಂತಿವೀರ ಚಂದ್ರಶೇಖರ ಪಾಟೀಲ್ ಕೃತಿಯನ್ನು ಎಲ್ಲ ಮಕ್ಕಳಿಗೆ ಪ್ರಕಾಶಕ ನಾಗರಾಜ ಕರ್ಪೂರ ಉಚಿತವಾಗಿ ವಿತರಿಸಿದರು.