ನೌಕರರ ಸಹಕಾರ ಸಂಘಕ್ಕೆ ರೂ. 5.37 ಲಕ್ಷ ಲಾಭ

Govt Emloyeess Society G.B. Photo-2
Published on

ಬೀದರ್: ಬೀದರ್ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸೌಹಾರ್ದ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ. 5.37 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಸಂಘದ ಮೂರನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘ ರೂ. 98.92 ಲಕ್ಷ ದುಡಿಯುವ ಬಂಡವಾಳ ಹೊಂದಿದೆ. ನಿರಂತರ ಲಾಭದಲ್ಲಿ ಮುನ್ನಡೆದಿದೆ ಎಂದು ತಿಳಿಸಿದರು.
ಬರುವ ದಿನಗಳಲ್ಲಿ ಸಂಘದಿಂದ ಅನೇಕ ಗ್ರಾಹಕರ ಸ್ನೇಹಿ ಯೋಜನೆಗಳನ್ನು ಜಾರಿಗೆ ತರುವ ಉದ್ದೇಶ ಇದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ ಉದ್ಘಾಟಿಸಿದರು.
ಮುಖಂಡ ಕಾಶೀನಾಥ ಬೆಲ್ದಾಳೆ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ್ರಮುಖರಾದ ಮಹೇಶ ಘಾಳೆ, ಮಲ್ಲಿಕಾರ್ಜುನ ಶೆಟಕಾರ್ ಮುಖ್ಯ ಅತಿಥಿಯಾಗಿದ್ದರು.
ನಿರ್ದೇಶಕರಾದ ಶಿವಕುಮಾರ ಕಟ್ಟೆ, ಬಕ್ಕಪ್ಪ ನಿರ್ಣಾಕರ್, ಶಾಮರಾವ್ ಮೊರ್ಗಿಕರ್, ಸಂಗ್ರಾಮ ಎಂಗಳೆ, ಕಮಲಾಬಾಯಿ ಪಂಚಾಕ್ಷರೆ, ಎಂ.ಡಿ. ಕಾಸಿಂ, ಡಾ. ವೈಶಾಲಿ, ರೂಪಾದೇವಿ, ಬಲವಂತ ರಾಠೋಡ್, ಗಣಪತಿ ಜಮಾದಾರ್, ಸುನೀಲ್, ವೆಂಕಟ ಸಿಂಧೆ, ಉಮೇಶ ಪಾಟೀಲ, ರಾಜಕುಮಾರ ಬೇಲೂರೆ, ಸಿದ್ದಮ್ಮ, ಡಾ. ಪ್ರಕಾಶ ವಾಘಮಾರೆ, ಡಾ. ಸಂಗಶೆಟ್ಟಿ ಶೆಟಕಾರ್ ಇದ್ದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿರಂಜನ ಪಂಚಾಕ್ಷರೆ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಬಸವರಾಜ ಜಕ್ಕಾ ಸ್ವಾಗತಿಸಿದರು. ನಿರ್ದೇಶಕ ಡಾ. ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ನಿರ್ದೇಶಕ ರಾಜಶೇಖರ ಮಂಗಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net