

ಬೀದರ್: ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರೂ ಆದ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ ಹೇಳಿಕೆ ಅನುಭವದಿಂದ ಕೂಡಿದ್ದಾಗಿದೆ ಎಂದು ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ ಹೇಳಿದ್ದಾರೆ.
ಲಿಂಗಾಯತ ಐಎಎಸ್ ಐಪಿಎಸ್ ಅಧಿಕಾರಿಗಳಲ್ಲದೆ, ಕೆಳ ಹಂತದ ಲಿಂಗಾಯತ ಅಧಿಕಾರಿಗಳಿಗೆ ಸರ್ಕಾರದಲ್ಲಿ ಅನ್ಯಾಯ ಆಗುತ್ತಿರುವುದು ಸತ್ಯ. ಮೊದಲಿನಿಂದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರಿಗೆ ಗೌರವ ಇಲ್ಲ. ಅನ್ಯಾಯ ಆಗುತ್ತಿರುವು ವಿಚಾರವನ್ನು ಶಾಮನೂರು ಹೇಳಿದ್ದು ಸತ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.