ಹೋರಾಟದ ಫಲವಾಗಿ 371(ಜೆ) ಜಾರಿ

vichar sankiran
Published on

ಬೀದರ್: ಮಾಜಿ ಸಚಿವ ದಿ.ವೈಜಿನಾಥ ಪಾಟೀಲ್ ಹೋರಾಟದ ಫಲವಾಗಿ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ ಕಲಂ 371(ಜೆ) ದೊರಕಿದೆ ಎಂದು ಸಾಹಿತಿ ಶಕೀಲ್ ಐ.ಎಸ್. ಹೇಳಿದರು.
ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ನಗರದಲ್ಲಿ ಏರ್ಪಡಿಸಿದ್ದ ಕಕ ರಚನಾತ್ಮಕ ಪ್ರಗತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, 371(ಜೆ) ಜಾರಿಯಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ, ಉದ್ಯೋಗದಲ್ಲಿ ಬಹಳಷ್ಟು ಅನುಕೂಲವಾಗಿದೆ. ಹೀಗಾಗಿ ಸ್ಥಳೀಯ ಜನಪ್ರತಿನಿಗಳು ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಗೌತಮ ಪಾಟೀಲ್ ಮಾತನಾಡಿ, 371(ಜೆ) ಜಾರಿಯಾದರೂ ಸಮರ್ಪಕ ಅನುಷ್ಠಾನಕ್ಕಾಗಿ ಹೋರಾಡಬೇಕಾಗಿದೆ ಎಂದು ಹೇಳಿದರು.
ಅಹಿಂದ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಸೈಬಣ್ಣ ಜಮಾದಾರ ಮಾತನಾಡಿ, ಕಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸರ್ಕಾರ ಸಾವಿರಾರು ಕೋಟಿ ರೂ. ನೀಡುತ್ತಿದೆ. ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಹಿರಿಯ ನ್ಯಾಯವಾದಿ ಗೌತಮ ವಾಗರಾಜ್ ಉದ್ಘಾಟಿಸಿದರು. ಸ್ವಾಮಿದಾಸ ಕೆಂಪೆನೋರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸಂಜಯ ಜಾಗೀರದಾರ್, ಸಂಜುಕುಮಾರ ಟೋಳ್ಳೆ, ಧನರಾಜ ಕರಕನಳ್ಳಿ, ಮೋಜಸ್ ನಿರ್ಣಾಕರ್, ಪೀಟರ್ ಶ್ರೀಮಂಡಲ, ಅವಿನಾಶ ಬೂದರಕರ್, ದಿಲೀಪಕುಮಾರ ವರ್ಮಾ, ಸಂಗಮೇಶ ಹಡಪದ, ಮಸ್ತಾನ್ ಮುಲ್ಲಾ, ಸುರೇಶ ಎನ್.ದೊಡ್ಡಿ, ನವೀನಕುಮಾರ ಅಲ್ಲಾಪುರ, ಸುಧಾಕರ ಢೋಣೆ, ಶಿವರಾಜ ಹಮೀಲಾಪುರಕರ್, ಸಂಜುಕುಮಾರ ಶ್ರೀಮಂಡಲ, ಅಂಬಾದಾಸ ಬೇಲೂರ, ರಿಚಡ್೯ ಹಮೀಲಾಪುರ, ಅನೀಲಕುಮಾರ ಸಿಂಧೆ, ಸಂಜುಕುಮಾರ ಗೋರನಳ್ಳಿ, ಕಮಲಹಸನ ಬಾವಿದೊಡ್ಡಿ, ಡಾ.ಜೇಮ್ಸ್, ಸುಶೀಲ ಕೆಂಪೆನೋರ್ ಇತರರಿದ್ದರು. ಸುನೀತಾ ಕಣಜೆ ಹಾಗೂ ಘಾಳೆಪ್ಪ ಅಂತಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net