ಬಿಎಸ್ಎಸ್ಕೆ ಲೆಕ್ಕಪತ್ರ ಕೊಡಿ

Subhash Ganga
Published on

ಬೀದರ್: ಜಿಲ್ಲೆಯ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ಕೆ) ಮುಚ್ಚಲಾಗಿದ್ದು, ಸುಭಾಷ ಕಲ್ಲೂರ್ ತಮ್ಮ ಅಧಿಕಾರದ ಅವಧಿಯ ಲೆಕ್ಕಪತ್ರವನ್ನು ಅ.14ರೊಳಗೆ ನೀಡಬೇಕು ಎಂದು ಕಾರ್ಖಾನೆ ಮಾಜಿ ನಿರ್ದೇಶಕ ಸುಭಾಷ ಗಂಗಾ ದುಬಲಗುಂಡಿ ಆಗ್ರಹಿಸಿದ್ದಾರೆ.
ನೀಡದಿದ್ದಲ್ಲಿ ಅ.15ರಂದು ಕಾರ್ಖಾನೆ ಆವರಣದಲ್ಲಿ ಷೇರುದಾರ ರೈತರ ಸಭೆ ಕರೆದು ಲೆಕ್ಕಪತ್ರ ತನಿಖೆ ನಡೆಸುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಬಳಿ ನಿಯೋಗ ಕೊಂಡೊಯ್ಯಲು ನಿರ್ಧರಿಸುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಲ್ಲೂರ್ ಅಧ್ಯಕ್ಷರಾಗಿದಾಗಿನಿಂದ ಲೆಕ್ಕಪತ್ರ ನೀಡಿಲ್ಲ. ಕಾರ್ಖಾನೆ 25 ಸಾವಿರ ಷೇರುದಾರರನ್ನು ಹೊಂದಿದೆ. ತಕ್ಷಣ ಲೆಕ್ಕಪತ್ರ ನೀಡಬೇಕು ಇಲ್ಲವಾದಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಧ್ಯಪ್ರವೇಶಿಸಿ ಕಾರ್ಖಾನೆ ಮತ್ತು ರೈತರ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಸಿಎಂ ಮತ್ತು ಸಹಕಾರ ಸಚಿವರೊಂದಿಗೆ ಚರ್ಚಿಸಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net