ಹಾವು ಕಡಿದು ರೈತ ಸಾವು

basavraj kamthane
Published on

ಬೀದರ್: ತಾಲೂಕಿನ ಮರಕಲ್ ಗ್ರಾಮದಲ್ಲಿ ಹಾವು ಕಡಿದು ರೈತ ಸಾವಿಗೀಡಾದ ಘಟನೆ ಭಾನುವಾರ ನಡೆದಿದೆ.

ಬಸವರಾಜ ಭೀಮಣ್ಣ ಕಮಠಾಣೆ (48) ಮೃತ ರೈತ. ಬಸವರಾಜ ಅವರು ಭಾನುವಾರ ಮೈಲಾರ (ಖಾನಾಪುರ) ಸಂತೆಯಲ್ಲಿ ಎಮ್ಮೆ ಖರೀದಿ ಮಾಡಿಕೊಂಡು ಮನೆಗೆ ತಂದು ಕಟ್ಟಿದ್ದಾರೆ. ಹುಲ್ಲು ತರಲು ಹೊಲಕ್ಕೆ ಹೋಗಿದ್ದಾಗ ಹಾವು ಕಚ್ಚಿದೆ. ತಕ್ಷಣ ನಗರದ ಬ್ರಿಮ್ಸ್ಗೆ ತರುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ನಿ, ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಸೋಮವಾರ ಬೆಳಗ್ಗೆ 11ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net