ಧನ್ನೂರ ಪಿಎಚ್.ಸಿಗೆ ಎನ್.ಕ್ಯೂ.ಎ.ಎಸ್ ಪ್ರಮಾಣ ಪತ್ರ

Dhannura (S) PHC
Published on

ಬೀದರ್: ಭಾಲ್ಕಿ ತಾಲ್ಲೂಕಿನ ಧನ್ನೂರ(ಎಸ್) ಪ್ರಾಥಮಿಕ ಆರೋಗ್ಯ ಕೇಂದ್ರವು ಸತತ ಎರಡನೇ ಬಾರಿಗೆ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡ(ಎನ್.ಕ್ಯೂ.ಎ.ಎಸ್) ಪ್ರಮಾಣ ಪತ್ರ ಪಡೆಯುವ ಮೂಲಕ ಗಮನ ಸೆಳೆದಿದೆ.
ಕಾಯಕಲ್ಪ ಕಾರ್ಯಕ್ರಮದಡಿ ಸತತ ಮೂರನೇ ವರ್ಷವೂ ಜಿಲ್ಲೆಗೆ ಪ್ರಥಮ ಸ್ಥಾನದ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ.
ಸೇವಾ ನಿಬಂಧನೆ, ಸ್ವಚ್ಛತೆ, ರೋಗಿಯ ಹಕ್ಕು, ಒಳ ಹರಿವು, ಬೆಂಬಲ ಸೇವೆ, ಸೋಂಕು ನಿಯಂತ್ರಣ, ಗುಣಮಟ್ಟದ ನಿರ್ವಹಣೆ ಹಾಗೂ ಫಲಿತಾಂಶ ಆಧಾರದಲ್ಲಿ ಕೇಂದ್ರಕ್ಕೆ ಎನ್.ಕ್ಯೂ.ಎ.ಎಸ್ ಪ್ರಮಾಣ ಪತ್ರ ಸಂದಿದೆ.
ಪ್ರಮಾಣ ಪತ್ರಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮೌಲ್ಯಮಾಪನ ನಡೆಸಲಾಗುತ್ತದೆ.
ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಕೇಂದ್ರಕ್ಕೆ ಎರಡನೇ ಬಾರಿಗೆ ಎನ್.ಕ್ಯೂ.ಎ.ಎಸ್ ಪ್ರಮಾಣ ಪತ್ರ ಹಾಗೂ ಮೂರನೇ ಬಾರಿಗೆ ಜಿಲ್ಲಾಮಟ್ಟದ ಕಾಯಕಲ್ಪ ಕಾರ್ಯಕ್ರಮದ ಪ್ರಥಮ ಪ್ರಶಸ್ತಿ ಬಂದಿರುವುದು ಸಂತಸ ಉಂಟು ಮಾಡಿದೆ ಎಂದು ಕೇಂದ್ರದ ಆಡಳಿತ ವೈದ್ಯಾಧಿಕಾರಿ ದೇವಕಿ ಅಶೋಕ ನಾಗೂರೆ ಹೇಳಿದರು.
ಕೇಂದ್ರವು ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗೆ ಹೆಸರಾಗಿದೆ. ಪ್ರಶಸ್ತಿ ಆಸ್ಪತ್ರೆ ಸಿಬ್ಬಂದಿಯ ತಂಡದ ರೂಪದ ಸೇವೆಯ ಫಲವಾಗಿದೆ. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಾಗಿದೆ. ಬರುವ ದಿನಗಳಲ್ಲಿ ರೋಗಿಗಳಿಗೆ ಇನ್ನೂ ಉತ್ತಮ ಸೇವೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕೇಂದ್ರವು ಅಗತ್ಯ ಮೂಲಸೌಕರ್ಯಗಳ ಜತೆಗೆ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುತ್ತಿದೆ ಎಂದು ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿವೇಕ ಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net