ಬಗದಲ್‍ನಲ್ಲಿ ಜಲ ಸಂವಾದ ಕಾರ್ಯಕ್ರಮ

NYK- Bagdal Photo
Published on

ಬೀದರ್: ತಾಲ್ಲೂಕಿನ ಬಗದಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೆಹರು ಯುವ ಕೇಂದ್ರ ಹಾಗೂ ಭಗತ್‍ಸಿಂಗ್ ಯುವಕ ಸಂಘದ ವತಿಯಿಂದ ಮಳೆ ನೀರು ಹಿಡಿದಿಡಿ ಹಂತ-3 ಅಭಿಯಾನದ ಅಂಗವಾಗಿ ಜಲ ಸಂವಾದ ಕಾರ್ಯಕ್ರಮ ನಡೆಯಿತು.
ರಾಜ್ಯಮಟ್ಟದ ತರಬೇತುದಾರ ಆರ್.ಕೆ. ಚಾರಿ ಮಾತನಾಡಿ, ನೀರು ಬಹಳ ಅಮೂಲ್ಯವಾಗಿದೆ. ಹೀಗಾಗಿ ಹಿತ, ಮಿತವಾಗಿ ಬಳಸಬೇಕು ಎಂದು ತಿಳಿಸಿದರು.
ಈಚಿನ ವರ್ಷಗಳಲ್ಲಿ ಮಳೆ ಕೊರತೆ ಕಾರಣದಿಂದಾಗಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಳೆ ನೀರು, ಸಂಗ್ರಹಿಸಿ, ಮರು ಬಳಕೆ ಮಾಡುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಮಳೆ ನೀರು ಹಿಡಿದಿಡಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಾಚಾರ್ಯ ಚನ್ನಬಸವ ಹೇಡೆ, ಭಗತ್‍ಸಿಂಗ್ ಯುವಕ ಸಂಘದ ಅಧ್ಯಕ್ಷ ಸೋಮನಾಥ ಪೂಜಾರಿ, ಶಾಲೆ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net